Composer : Shri Jagannatha dasaru
ಸಂಕರ್ಷಣ ಜಯಾ ತನಯಗೆ ಮಂಗಳ
ಕಂತು ಭವನ ಪದವಿ ಯೋಗ್ಯಗೆ
ಶಂಕೆ ಇಲ್ಲದ ಜೀವರಾಶಿಗಳೊಳಗಚ್ಯು
ತಾ ಕಸ್ಥನೆನಿಸಿದ ಪವಮಾನಗೆ [೧]
ವಾನರ ವೇಷನಾ ತೋರ್ದಗೆ ಮಂಗಳ
ಭಾನುತನಯನ ಕಾಯ್ದಗೆ ಮಂಗಳ
ಜಾನಕಿಗುಂಗುರವಿತ್ತಗೆ ಮಂಗಳ
ದಾನವತತಿ ಪುರವ ದಹಿಸಿದವಗೆ ಮಂಗಳ [೨]
ಅತಿ ಬಲವಂತರೆಂದೆನಿಸಿದ ದೈತ್ಯ ಸಂ
ತತಿಗಳನೆಲ್ಲವ ಸವರಿದವಗೆ ಮಂಗಳ
ಪ್ರೋತನದೊಳಗೆ ಪ್ರತಿಕೂಲ ಸುಯೋಧನನ
ಮೃತಿಗೆ ಕಾರಣನಾದ ಮರುದಂಶಗೆ [೩]
ಏಳೇಳು ಲೋಕದ ಗುರುವರನೆನಿಸಿ ಮೂ
ರೇಳು ಕುಭಾಷ್ಯವ ಮುರಿದವಗೆ ಮಂಗಳ
ಏಳುಕೋಟಿ ಲೋಕದೊಳಗಿಟ್ಟು ದೈತ್ಯರ
ಪಳದಂತೆ ಮಾಡಿದ ಯತಿರಾಯಗೆ [೪]
ಮೂರು ರೂಪಗಳಿಂದ ಮುಕ್ತಿ ಪ್ರದಾಯಕ
ನಾರಾಧಿಸಿದ ಅನಿಮಿಷ ಪೂಜ್ಯಗೆ ಮಂಗಳ
ಶ್ರೀ ರಮಾರಮಣ ಜಗನ್ನಾಥ ವಿಠಲನ
ಕಾರುಣ್ಯ ಪಾತ್ರ ಸಮೀರಣಗೆ ಮಂಗಳ [೫]
saMkarShaNa jayA tanayage maMgaLa
kaMtu Bavana padavi yOgyage
SaMke illada jIvarASigaLoLagacyu
tA kasthanenisida pavamAnage [1]
vAnara vEShanA tOrdage maMgaLa
BAnutanayana kAydage maMgaLa
jAnakiguMguravittage maMgaLa
dAnavatati purava dahisidavage maMgaLa [2]
ati balavaMtareMdenisida daitya saM
tatigaLanellava savaridavage maMgaLa
prOtanadoLage pratikUla suyOdhanana
mRutige kAraNanAda marudaMSage [3]
ELELu lOkada guruvaranenisi mU
rELu kuBAShyava muridavage maMgaLa
ELukOTi lOkadoLagiTTu daityara
paLadaMte mADida yatirAyage [4]
mUru rUpagaLiMda mukti pradAyaka
nArAdhisida animiSha pUjyage maMgaLa
SrI ramAramaNa jagannAtha viThalana
kAruNya pAtra samIraNage maMgaLa [5]
Leave a Reply