Rathavanerida Shri Hanumanta

Composer : Shri Gurugovinda dasaru

By Smt.Shubhalakshmi Rao

ರಥವಾನೇರಿದ ಶ್ರೀ ಹನುಮಂತ | ಭೀಮ ಬಲವಂತ [ಪ]
ಗತ ಶೋಕನ ಪದ | ರತಿ ಇಚ್ಛಿಪರಿಗೆ ಹಿತದಿಂದಲಿ ಸದ್ |
ಗತಿಯ ಕೊಡುವೆನೆಂದು [ಅ.ಪ.]

ತತುವಾಭಿಮಾನಿ ದಿವಿಜರಲ್ಲಿ |
ಕಲಹ ಬರಲಲ್ಲಿ | ಉತ್ತಮರ್ಯಾರೆಮ್ಮೊಳು ಎಂಬಲ್ಲಿ |
ಅದ ಪರಿಹರಿಪಲ್ಲಿ ||
ವಿತತ ಮಹಿಮ ತಾ | ಗತನಿರೆ ದೇಹದಿಂದಿತರರ
ನಿಯಮನ |
ಪತಿ ಕರಿಸೆನ್ನಲು | ಪ್ರತಿ ಪ್ರತಿ ತತುವರು |
ಗತ ವಿಭವದಲಿರೆ ಪ್ರತಿ ನಿನಗಿಲ್ಲೆಂದೆ |
ನುತಲಿ ತೋರಿದ (೧)

ದಿತಿಜ ಕುಲ ಕದಳೀವನ ಕುಠಾರ |
ಪರಿಹರಿಸಿದೆ ಸುರರ |
ಅತಿಶಯ ಮತಿ ಭ್ರಮೆಯಿಂದವರ |
ಶರಧಿಯ ಮಥಿಸುವರ ||
ಮೃತಿಪಥಕೊಯ್ಯುವ | ಗರ ಉದುಭವಿಸಲು
ಗತದಿಂದಲಿ ಜಗ | ಪತಿಯಾಣತಿಗಳ |
ಪತಿ ಕರಿಸುತ ನೀ | ಪಾತ್ರಗ ಗರವನುಮತಿ
ವಂತನೆ ಕುಡಿ | ದತಿಶಯ ತೋರಿದೆ (೨)

ಮೂರು – ಕೋಟಿಯ ರೂಪ – ಧರನೆ |
ಮೂರ್ವಿಕ್ರಮ ಸೇವಕನೆ | ಮೂರು ಲೋಕಂಗಳ
ವ್ಯಾಪಕನೆ | ರಕ್ಕಸಾಂತಕನೆ ||
ಆರು ಮೂರುಗಳು | ಎರಡೊಂದನೆ
ದಶನೂರು ಮೇಲೆ ಆ |
ರ್ನೂರ್ ಜಪಗಳ | ಮೂರು ಭೇದ ವಿಹ |
ಜೀವರುಗಳಲಿ ವಾರ ವಾರಕೆ ನೀ |
ಗೈಯ್ಯುವೆ ಗುರುವೇ (೩)

ದಕ್ಷಿಣಾಕ್ಷಿಯಲಿ ದಕ್ಷನೆ ವತ್ಸ |
ರೂಪದಿ ನೀ ಸ್ವೇಚ್ಛಾ-ತ್ರ್ಯಕ್ಷಾದ್ಯರಿಗ
ದ್ಯಕ್ಷನೆ ಮಾತರಿಶ್ವ |
ನಿನ್ನಿಂ ಸೇವಿತ ವಿಶ್ವ ||
ಮೋಕ್ಷಪದೇಚ್ಛಿಸಿ | ಸೇವಿಪ ಜನರನು ಈಕ್ಷಿಸಿ
ಕರುಣ ಕ | ಟಾಕ್ಷದಿ ಅವರನು |
ಸಾಕ್ಷಿ ಮಾಡುತಲಿ | ಕರ್ಮ ಸಮೂಹವ
ಸಾಕ್ಷಾತ್ತಾಗಿ ತಾನೆ | ಗೈಯ್ಯುವೆನೆಂದು (೪)

ಪ್ರಾಣಾಪಾನ ವ್ಯಾನ ಉದಾನ | ಸಮಾನ
ರೂಪಕ ವಿಜ್ಞಾನ ಬಲ ಆನಂದ ಸುಪೂರ್ಣ |
ಅಮೃತಾಭಿಧಾನ ||
ಮಾನಿನಿ ದ್ರೌಪದಿ | ಆನನ ಕಮಲಕೆ
ಭಾನುವೆನಿಸುತಲಿ | ದುಶ್ಯಾಸನನ ಗೋಣ
ಮುರಿದುರದಿ |
ಕೋಣನ ವಿರಚಿಸಿ ಶೋಣಿತ ಕುಡಿದಂತೆ |
ಕಾಣುವೆನೆಂದು (೫)

ವಂಭತ್ತು ಎಂಟು ಸಾವಿರದಲ್ಲಿ |
ನಾಡೀ ನದಿಯಲ್ಲಿ | ಅಂಬುಜ –
ನಾಭನಿಗೆ ನೀನಲ್ಲೀ | ಗೋಳಕನಾಗ್ಯಲ್ಲಿ ||
ಕಂಬು ಚಕ್ರಧರ | ಅಂಬುಜ ನಯನನ
ಬೆಂಬಿಡದಲೆ ನೀ | ಸಂಭಮ್ರದಲಿ ನಿನ |
ಅಂಬಕದಲಿ ನಿನ |
ಬಿಂಬನ ಕಾಣುತ ತ್ರ್ಯಂಬಕನಿಂ ಸಂ |
ಭಾವನೆ ಗೊಳ್ಳುತ (೬)

ಮಾಘ ಶುದ್ಧವು ನವಮಿಯ ದಿನದಿ |
ಪಾರ್ಥಿವ ವತ್ಸರದಿ ಸಾಗರ ಕಟ್ಟೆ
ಯತಿ ಸಮ್ಮುಖದಿ | ಕುಳ್ಳಿರುತಲಿ ರಥದಿ ||
ನಿಗಮಗಳಿಗೆ ಸಿಗ |
ದಗಣಿತ ಗುಣಮಣಿ ಖಗವಹ ಗುರು ಗೋ |
ವಿಂದ ವಿಠ್ಠಲನ | ಸುಗುಣ ಗಣಂಗಳ |
ಬಗೆ ಬಗೆಯಿಂದಲಿ ಪೊಗಳುವರಘಗಳ |
ನೀಗುವೆನೆನ್ನುತ (೭)


rathavAnErida SrI hanumaMta | BIma balavaMta [pa]
gata SOkana pada | rati icCiparige hitadiMdali sad |
gatiya koDuveneMdu [a.pa.]

tatuvABimAni divijaralli |
kalaha baralalli | uttamaryAremmoLu eMballi |
ada pariharipalli ||
vitata mahima tA | gatanire dEhadiMditarara
niyamana |
pati karisennalu | prati prati tatuvaru |
gata viBavadalire prati ninagilleMde |
nutali tOrida (1)

ditija kula kadaLIvana kuThAra |
parihariside surara |
atiSaya mati BrameyiMdavara |
Saradhiya mathisuvara ||
mRutipathakoyyuva | gara uduBavisalu
gatadiMdali jaga | patiyANatigaLa |
pati karisuta nI | pAtraga garavanumati
vaMtane kuDi | datiSaya tOride (2)

mUru – kOTiya rUpa – dharane |
mUrvikrama sEvakane | mUru lOkaMgaLa
vyApakane | rakkasAMtakane ||
Aru mUrugaLu | eraDoMdane
daSanUru mEle A |
rnUr japagaLa | mUru BEda viha |
jIvarugaLali vAra vArake nI |
gaiyyuve guruvE (3)

dakShiNAkShiyali dakShane vatsa |
rUpadi nI svEcCA-tryakShAdyariga
dyakShane mAtariSva |
ninniM sEvita viSva ||
mOkShapadEcCisi | sEvipa janaranu IkShisi
karuNa ka | TAkShadi avaranu |
sAkShi mADutali | karma samUhava
sAkShAttAgi tAne | gaiyyuveneMdu (4)

prANApAna vyAna udAna | samAna
rUpaka vij~jAna bala AnaMda supUrNa |
amRutABidhAna ||
mAnini draupadi | Anana kamalake
BAnuvenisutali | duSyAsanana gONa
muriduradi |
kONana viracisi SONita kuDidaMte |
kANuveneMdu (5)

vaMBattu eMTu sAviradalli |
nADI nadiyalli | aMbuja –
nABanige nInallI | gOLakanAgyalli ||
kaMbu cakradhara | aMbuja nayanana
beMbiDadale nI | saMBamradali nina |
aMbakadali nina |
biMbana kANuta tryaMbakaniM saM |
BAvane goLLuta (6)

mAGa Suddhavu navamiya dinadi |
pArthiva vatsaradi sAgara kaTTe
yati sammuKadi | kuLLirutali rathadi ||
nigamagaLige siga |
dagaNita guNamaNi Kagavaha guru gO |
viMda viThThalana | suguNa gaNaMgaLa |
bage bageyiMdali pogaLuvaraGagaLa |
nIguvenennuta (7)

Leave a Reply

Your email address will not be published. Required fields are marked *

You might also like

error: Content is protected !!