Composer : Shri Gurujagannatha dasaru
ನೀನೆ ಪಾಲಿಸೊ ಎನ್ನ ಮಾರುತಿರಾಯ [ಪ]
ನೀನೆ ಪಾಲಿಸೊ ಮಹಾನುಭಾವನೆ ಸದಾ
ಜ್ಞನ ಭಕುತಿನಿತ್ತು ಮಾನಾದಿ ನೀ ವೇಗ [ಅ.ಪ]
ನಿನ್ನ ಆಧಾರ ಲೋಕಾ ಜನರು ಸದಾ
ನಿನ್ನ ಭಜಿಸುವೊರೇಕಾ ಪ್ರಕಾರದಿ
ನಿನ್ನ ಸೇವಿಪರನೀಕಾ ಸಂಗಾವಿತ್ತು
ನಿನ್ನ ಧ್ಯಾನಿಪ ವಿವೇಕಾ ಮತಿಯನಿತ್ತು
ಮನ್ನಿಸೊ ಮಜ್ಜನಕಾ
ನಿನ್ನಾ ಭಜಿಪರಿಗೆ ಅನ್ಯಾಲೋಕಗಳುಂಟೆ
ಘನ್ನಾ ಹರಿಯ ಲೋಕವನ್ನೆ ಸೇರುವರಯ್ಯಾ [೧]
ಸಂತತ ಪವಮಾನನು ನೀನೆ ಸರ್ವ
ರಂತರ ದೊಳಗಿಹನು ಎಂದು ನಿನ್ನಾ
ನಂತ ರೂಪಗಳನ್ನು ಭಜಿಸುವ
ಗಂತು ಸುಜ್ಞಾನವನ್ನು ನೀಡುತ ಜನ
ರಂತರದಲಿ ನೀನು
ನಿಂತು ಪಾಲಿಸಿ ಜೀವರಂತೆ ಗತಿಯನಿತ್ತು
ಕಂತುರಾದ್ಯರ ಸಂತತಿ ವಂದ್ಯನೆ [೨]
ಸೀತಾರಾಮನ ಪಾದವಾ ಸೇವಿಸಿ ನಿತ್ಯ
ಪಾತಕಾಂಬುಧಿಗೆ ದಾವಾನಂತೆ ಜಗದಿ
ಈ ತೆರದಲಿ ಮೆರೆವಾನೆಂದು ಈಗ
ಸೋತು ನಾ ಬಂದೆ ದೇವಾ ನೀನೇ ಎನ್ನ
ಮಾತು ಲಾಲಿಸೊ ದ್ಯುಧವಾ
ಮಾತರಿಶ್ವ ನಿಜ ದೂತಾನು ನಾನಯ್ಯ
ನೀತ ಗುರು ಜಗನ್ನಾಥವಿಠ್ಠಲಪ್ರಿಯ [೩]
nIne pAliso enna mArutirAya [pa]
nIne pAliso mahAnuBAvane sadA
j~jana Bakutinittu mAnAdi nI vEga [a.pa]
ninna AdhAra lOkA janaru sadA
ninna BajisuvorEkA prakAradi
ninna sEviparanIkA saMgAvittu
ninna dhyAnipa vivEkA matiyanittu
manniso majjanakA
ninnA Bajiparige anyAlOkagaLuMTe
GannA hariya lOkavanne sEruvarayyA [1]
saMtata pavamAnanu nIne sarva
raMtara doLagihanu eMdu ninnA
naMta rUpagaLannu Bajisuva
gaMtu suj~jAnavannu nIDuta jana
raMtaradali nInu
niMtu pAlisi jIvaraMte gatiyanittu
kaMturAdyara saMtati vaMdyane [2]
sItArAmana pAdavA sEvisi nitya
pAtakAMbudhige dAvAnaMte jagadi
I teradali merevAneMdu Iga
sOtu nA baMde dEvA nInE enna
mAtu lAliso dyudhavA
mAtariSva nija dUtAnu nAnayya
nIta guru jagannAthaviThThalapriya [3]
Leave a Reply