Nanda teeratharembo

Composer : Shri Prasannavenkata dasaru [on Kandavalli Hanuma]

By Smt.Shubhalakshmi Rao

ನಂದತೀರಥರೆಂಬೋ ಅಭಿದಾನದಿಂ ಮೆರೆವಾ |
ಕಂದವಳ್ಳಿಯ ಹನುಮಗೊಂದಿಸುವೆ ದಿನದಿನಾ [ಪ]

ತ್ರೇತೆಯಲ್ಲಿ ಹನುಮದವತಾರವನೆತ್ತುತಾ |
ಅತಿತರಘುಪತಿಗತಿ ಮುನಿಯವನಾದಾ |
ಯೆತ್ತಿತಂದೌಷಧಿಯ ಗಿರಿಯನ್ನು ತ್ವರಿತಾ ||
ಸತ್ತ ಲಕ್ಷ್ಮಣಾದಿಗಳ ಜೀವರಕ್ಷಿಸಿದಾ [೧]

ಸೌಗಂಧ ಪುಷ್ಪವನು ಮುಡಿಗಿರಿಸಿ ಮಡದಿಗೆ |
ಹಗಲಿರುಳು ಕಾಯ್ದಾ ಕೀಚಕಾದಿಗಳಿಂದ ||
ಬಗ್ಗಿಸುತ ಬಕಾಸುರ ಹಿಡಿಂಬಕರ ದುರ್ನಡತೆ |
ಭಗವನ್ಮಯತೆ ತೋರಿದಾ ಬಾಹುಬಲಿ ಭೀಮಾ [೨]

ಮೂಲರೂಪದಲಿ ಮರುತ ಮುನಿಯಾಗಿ ನೀ |
ಕಲಿಮಲವ ತೊಳೆದಿ ಲಲಿತ ಗ್ರಂಥಗಳಿಂದ ||
ಶ್ರೀಲೋಲನೆಲ್ಲರೊಳಧಿಕೆಂದು ಸಾರುತ್ತ |
ಬಲಪ್ರಸನ್ವೆಂಕಟನ ನಿಜದಾಸ ನೀನಾದ [೩]


naMdatIrathareMbO aBidAnadiM merevA |
kaMdavaLLiya hanumagoMdisuve dinadinA [pa]

trEteyalli hanumadavatAravanettutA |
atitaraGupatigati muniyavanAdA |
yettitaMdauShadhiya giriyannu tvaritA ||
satta lakShmaNAdigaLa jIvarakShisidA [1]

saugaMdha puShpavanu muDigirisi maDadige |
hagaliruLu kAydA kIcakAdigaLiMda ||
baggisuta bakAsura hiDiMbakara durnaDate |
Bagavanmayate tOridA bAhubali BImA [2]

mUlarUpadali maruta muniyAgi nI |
kalimalava toLedi lalita graMthagaLiMda ||
SrIlOlanellaroLadhikeMdu sArutta |
balaprasanveMkaTana nijadAsa nInAda [3]

Leave a Reply

Your email address will not be published. Required fields are marked *

You might also like

error: Content is protected !!