Moodala bagila mukhyaprana

Composer : Shri Prasannavenkata dasaru [on Mulbagila Prana devaru]

By Smt.Shubhalakshmi Rao

ಮೂಡಲ ಬಾಗಿಲ ಮುಖ್ಯಪ್ರಾಣಾ |
ಕೊಡು ನಿನ್ನೊಡೆಯನೊಳೆನ್ನ ಮನಾ [ಅ.ಪ]

ಕಡಿದು ಕಲ್ಪಣಿಯ ಕಡಲೊಳಗಿಡುತಾ |
ದೌಡದಿ ಸೇತುವೆ ಕಟ್ಟಿದ ಗಾರುಡಿ |
ಗಿಡಗಳೆಲ್ಲ ಕಿತ್ತಾಡಿ ವನವನು ಹಾಳು |
ಗೆಡುಹಿದಾ ಪ್ರೌಢ ಪ್ರತಾಪನೆ [೧]

ಗಡನೆ ಕೀಚಕ ಬಕ ಹಿಡಿಂಬಕ |
ರೊಡಲನೆ ಬಗೆದಾ ದಾಡ್ಯ ದೇಹನೆ ||
ಕಡು ಚೆಲುವಿನ ಹೆಣ್ಣಾಗಿ ತೋರಿದ |
ಬೆಡಗಿನ ರೂಪದ ಕಡು ವೈರಾಗ್ಯ ಮೂರ್ತಿ [೨]

ತೀಡಿ ತಿದ್ದಿ ಸಕಲಾರ್ಥ ಶಾಸ್ತ್ರಗಳ |
ನಾಡಾಡಿಗಳ ವಾದಿಸಿ ಜಯಿಸಿದೆ
ನಾಡಿಗೆಲ್ಲ ಪ್ರಸನ್ವೆಂಕಟನೊಬ್ಬನೆ |
ಒಡೆಯನೆಂತೆಂದಡಿಗಡಿಗ್ ಹೇಳಿದ [೩]


mUDala bAgila muKyaprANA |
koDu ninnoDeyanoLenna manA [a.pa]

kaDidu kalpaNiya kaDaloLagiDutA |
dauDadi sEtuve kaTTida gAruDi |
giDagaLella kittADi vanavanu hALu |
geDuhidA prauDha pratApane [1]

gaDane kIcaka baka hiDiMbaka |
roDalane bagedA dADya dEhane ||
kaDu celuvina heNNAgi tOrida |
beDagina rUpada kaDu vairAgya mUrti [2]

tIDi tiddi sakalArtha SAstragaLa |
nADADigaLa vAdisi jayiside
nADigella prasanveMkaTanobbane |
oDeyaneMteMdaDigaDig hELida [3]

Leave a Reply

Your email address will not be published. Required fields are marked *

You might also like

error: Content is protected !!