Composer : Shri Harapanahalli Bheemavva [on Adoni Mangaraya]
ಮರೆಯದೆ ಸಲಹೆನ್ನನು ಯಾದವಗಿರಿ-
ದೊರೆ ಮಂಗರಾಯ ನೀನು |
ಸರ್ವಜೀವೋತ್ತಮನೆ ನಿನ್ನಯ
ಮೊರೆಯ ಹೊಕ್ಕೆನು ಮಾರುತಾತ್ಮಜ
ಕರೆದು ಭಕ್ತರಿಗ್ ವರವ ನೀಡುವ
ಬಿರಿದು ನಿನ್ನದು ಭಾರತೀಶ [ಪ]
ಸೀತಾವಲ್ಲಭ ರಾಮರ ಪಾದಾಂಬುಜ
ದೂತನೆಂದೆನಿಸಿದೆಯೊ |
ಮಾತೆಗಿತ್ತು ಮುದ್ರಿಕೆಯನ್ನು
ಖ್ಯಾತ ರಾವಣನ ಪುರಕೆ
ಕಾರ್ತೀಕದುತ್ಸವ ಮಾಡಿ ಮಂಗ-
ಳಾರ್ತಿ ಬೆಳಗಿದೆ ಬಾಲದಿಂದ [೧]
ಬಕ ಹಿಡಿಂಬಕ ಕೀಚಕ ಕಿಮ್ಮೀರ
ಮಾಗಧ ಮುಖ ಪ್ರಮುಖರನು |
ಸಕಲ ಅನುಜರ ಸಹಿತ ದುರ್ಯೋಧನನ
ಪ್ರಾಣವ ಸೆಳೆದು ಬ್ಯಾಗನೆ
ನಕುಲ ಧರ್ಮಜನಾ ಸಹದೇವ ದ್ರೌಪದಿಗೆ
ಸುಖ ಸಂತೋಷ ನೀಡಿದೆ [೨]
ಮಧ್ಯಗೇಹರಲಿ ಜನಿಸಿ ಸುಜನರಿಗೆ
ಶುದ್ಧಶಾಸ್ತ್ರವ ಬೋಧಿಸಿ |
ಗೆದ್ದು ಮಾಯಾವಾದಿಗಳನು ಪ್ರ-
ಸಿದ್ಧನೆನಿಸಿದೆ ಮಧ್ವಮುನಿ
ಮುದ್ದು ಭೀಮೇಶಕೃಷ್ಣನ ಪ್ರ-
ಸಿದ್ಧ ಮಾಡಿದೆ ಪರಮ ಗುರುವೆ [೩]
mareyade salahennanu yAdavagiri-
dore maMgarAya nInu |
sarvajIvOttamane ninnaya
moreya hokkenu mArutAtmaja
karedu Baktarig varava nIDuva
biridu ninnadu BAratISa [pa]
sItAvallaBa rAmara pAdAMbuja
dUtaneMdenisideyo |
mAtegittu mudrikeyannu
KyAta rAvaNana purake
kArtIkadutsava mADi maMga-
LArti beLagide bAladiMda [1]
baka hiDiMbaka kIcaka kimmIra
mAgadha muKa pramuKaranu |
sakala anujara sahita duryOdhanana
prANava seLedu byAgane
nakula dharmajanA sahadEva draupadige
suKa saMtOSha nIDide [2]
madhyagEharali janisi sujanarige
SuddhaSAstrava bOdhisi |
geddu mAyAvAdigaLanu pra-
siddhaneniside madhvamuni
muddu BImESakRuShNana pra-
siddha mADide parama guruve [3]
Leave a Reply