Idane Paliso Hanuma

Composer : Shri Gurujagannatha dasaru

By Smt.Shubhalakshmi Rao

ಇದನೆ ಪಾಲಿಸೋ ಹನುಮ ಮಾಳ್ಪೆನೋ
ಪದಪದುಮ ಯುಗಕೆ ಪ್ರಣಾಮ || ಪ ||

ಸದಯನೆ ನಾ ನಿನ್ನ ಇದನನು ಬೇಡಿದೆ
ಪದುಮ ನಯನ ಶ್ರಿ ಮುದತೀರಥರಾಯ || ಅ.ಪ ||

ದಿವಸ ಪೋದವಲ್ಲ ಗುರುಗಳ ಅನುಭವಾಗಲಿಲ್ಲ
ಪವನ ತನಯ ನೀ ಜವದಲಿ ಮಾಡಲು
ಭುವನದೊಳಗೆ ಬೃಹಚ್ಛ್ರವನು ಎನಿಸುವೇನು || ೧ ||

ಧನವು ಎನಗೆ ಇಲ್ಲ ಸಹಾಯಕ ಜನರು ಮೊದಲೇ ಇಲ್ಲ
ಧನಪ ಸಖನನ ಜನಕನು ನೀನಿರೇ
ಮನುಜರ ಬೇಡೋದು ಘನತಿ ಎನಗಲ್ಲ || ೨ ||

ದಾತ ಇದನು ಪೂರ್ತಿಮಾಡೋ ಧಾತನಾ ಶರಣಾರ್ಥಿ
ಯಾತಕೆ ಸುಮ್ಮನೆ ಈತೆರ ಇರುವುದು
ದಾತನೆ ಗುರು ಜಗನ್ನಾಥ ವಿಠ್ಠಲ ದೂತ || ೩ ||


idane pAlisO hanuma mALpenO
padapaduma yugake praNAma || pa ||

sadayane nA ninna idananu bEDide
paduma nayana Sri mudatIratharAya || a.pa ||

divasa pOdavalla gurugaLa anuBavAgalilla
pavana tanaya nI javadali mADalu
BuvanadoLage bRuhacCravanu enisuvEnu || 1 ||

dhanavu enage illa sahAyaka janaru modalE illa
dhanapa saKanana janakanu nInirE
manujara bEDOdu Ganati enagalla || 2 ||

dAta idanu pUrtimADO dhAtanA SaraNArthi
yAtake summane Itera iruvudu
dAtane guru jagannAtha viThThala dUta || 3 ||

Leave a Reply

Your email address will not be published. Required fields are marked *

You might also like

error: Content is protected !!