Composer : Shri Prasannavenkata dasaru [on Shikharipura Brantesha]
ಎಂತಹುದೊ ನಿನ್ನ ಗುಣ ಹನುಮಂತದೇವಾ |
ಕಂತುಪಿತನಡಿಗಡಿಗೆ ಸಾರಿ ಸುಖಿಸುತಲಿರುವಾ [ಅ.ಪ]
ನಿರುತ ವೈರಾಗ್ಯವನು ಬೇಡಿ ಶ್ರೀಹರಿಯಲ್ಲಿ |
ಪರಿಪೂರ್ಣ ಜ್ಞಾನಕಧಿಕಾರಿಯೆನಿಸಿ |
ಮೂರಾವತಾರವನು ಧರಿಸಿ ಧಾರುಣಿಯಲ್ಲಿ |
ಮಾರನ್ನ ಪಿತನೊಲುಮೆ ಪಡೆದು ಮೆರೆದಿ [೧]
ತಂತು ಜೀವರಿಗೆ ನೀ ಅತ್ಯಂತ ಪ್ರೀಯನೆನಿಸಿ |
ಪಂಥ ಸ್ವೀಕರಿಸಿ ಜಗದ್ ಹಂತಕರ ತರಿದಿ |
ಸಂತನಾಗಿ ಘನ ಸಿದ್ಧಾಂತ ಮಂಡಿಸಿ ಹರಿಗೆ |
ಭ್ರಾಂತನೆನಿಸುತಲಿರುವ ವೇದಾಂತ ನಿಧಿಯೆ [೨]
ಅಜ್ಞಾನವನು ಅಳಿಸಿ ನಿಜಮುಕುತಿ ಸಾಧನಕೆ |
ಸುಜ್ಞಾನದಾ ಹೊಳೆ ಹರಿಸಿ ಸುಜನರ ಪೊರೆದೆ |
ವಿಜ್ಞಾನಗಮ್ಯ ಸಿರಿ ಪ್ರಸನ್ವೆಂಕಟನಂಘ್ರಿ
ಪ್ರಾಜ್ಞ ಭಾವದಿ ಭಜಿಪ ಸರ್ವಜ್ಞರಾಯನೀ [೩]
eMtahudo ninna guNa hanumaMtadEvA |
kaMtupitanaDigaDige sAri suKisutaliruvA [a.pa]
niruta vairAgyavanu bEDi SrIhariyalli |
paripUrNa j~jAnakadhikAriyenisi |
mUrAvatAravanu dharisi dhAruNiyalli |
mAranna pitanolume paDedu meredi [1]
taMtu jIvarige nI atyaMta prIyanenisi |
paMtha svIkarisi jagad haMtakara taridi |
saMtanAgi Gana siddhAMta maMDisi harige |
BrAMtanenisutaliruva vEdAMta nidhiye [2]
aj~jAnavanu aLisi nijamukuti sAdhanake |
suj~jAnadA hoLe harisi sujanara porede |
vij~jAnagamya siri prasanveMkaTanaMghri
prAj~ja BAvadi Bajipa sarvaj~jarAyanI [3]
Leave a Reply