Composer : Shri Prasannavenkata dasaru [on Bedi Anjaneya – Tirupati]
ಬೇಡಿ ಭೀಮನ ಬಿಡದೆ ಬೇಡಲು |
ಕೊಡುವಾ ಕಡು ವೈರಾಗ್ಯ ಜ್ಞಾನವನ್ನು ||ಪ||
ತುಡುಕಿ ಹರಿಯ ಕಡೆತನಕ ಸೇವೆಯನು |
ಮಾಡುತ ಪಡುವಾ ಸೇವಾ ಸುಖವನು |
ದೃಢದಿ ಹರಿ ಒಡೆತನವ ನಂಬುವಗೆ |
ಕಡೆಹಾಯಿಸುವಾ ಕೈ ಹಿಡಿದಾಕಡೆ ||೧||
ಒಡನೆ ಲಂಕೆಯ ಬೆಂಕಿಗಿಡುತಗಡ |
ಮಡದಿಗೆ ಮುಡಿಸಿ ಬೆಡಗಿನಾ ಕುಸುಮ |
ಕಾಡುವ ಕಲಿಗುಣಕೆ ಕೊಡಲಿಯಿಟ್ಟನು |
ನಾಡಾಡಿಗಳೊಳ್ ಗೂಡನೆನಿಪಸುರ ||೨||
ಬಿಡಿಸಿ ಅರಿಷಡ್ವರ್ಗವ ಮನದಿಂ |
ಕೂಡಿಸಿ ಕೊಡುವನು ಇಷ್ಟಾರ್ಥಗಳನು |
ಮೃಡಸಖ ಸಿರಿಪ್ರಸನ್ವೆಂಕಟರೇಯನ |
ಗೂಡಾರ್ಥಗಳನ್ನು ತಿಳಿದಗಾಧ ಖಣಿ ||೩||
bEDi BImana biDade bEDalu |
koDuvA kaDu vairAgya j~jAnavannu ||pa||
tuDuki hariya kaDetanaka sEveyanu |
mADuta paDuvA sEvA suKavanu |
dRuDhadi hari oDetanava naMbuvage |
kaDehAyisuvA kai hiDidAkaDe ||1||
oDane laMkeya beMkigiDutagaDa |
maDadige muDisi beDaginA kusuma |
kADuva kaliguNake koDaliyiTTanu |
nADADigaLoL gUDanenipasura ||2||
biDisi ariShaDvargava manadiM |
kUDisi koDuvanu iShTArthagaLanu |
mRuDasaKa siriprasanveMkaTarEyana |
gUDArthagaLannu tiLidagAdha KaNi ||3||
Leave a Reply