Composer : Shri Prasannavenkata dasaru [on Ellaikarai – Srirarangam Prana devaru]
ಅಳೆಕಲ್ಲು ಹನುಮಂತರಾಯಾ ನಿನ್ನ |
ಕಾಲಿಗೆರಗುವೆ ಸಲಹೆನ್ನ ಜೀಯಾ [ಪ]
ಅಂಜನೀಸುತ ನೀ ಅಂಜಿಕೆಯಿಲ್ಲದೇ |
ಭುಂಜಿಸಿದೆಂಜಲು ಯೆಡೆವೋಯ್ದು ನಿಂದೆ ||
ಸಂಜೀವರಾಯ ಧನಂಜಯಗೊಲಿದು |
ಪ್ರಾಂಜ್ವಲರಥನೇರಿ ರಂಜಿಸಿ ಮೆರೆದೆ [೧]
ಅಂಗದ ಮೊದಲಾದ ಮಂಗಗಳೊಡಗೂಡಿ |
ರಂಗನ ಅಂಗನೆಯಳ ಹುಡುಕಾಡಿ ||
ಲಂಘಿಸಿ ಲಂಕೆಯ ಅಂಗಳಕ್ ಹಾರುತ್ತ |
ಭಂಗಿಸಿ ರಾವಣನ ಜಂಗುಳಿ ಮುರಿದಿ [೨]
ರಾಮನ್ನ ನಾಮಾ ನೇಮದಿ ನೆನೆಯುತ್ತ |
ಕಾಮನ್ನ ದೂರಿಟ್ಟ ಸೋಮ ನಿಸ್ಸೀಮಾ ||
ನೇಮಿಸಿ ಕ್ಷಣದಲ್ಲಿ ವ್ಯೋಮಕ್ಕೆ ಜಿಗಿದಾ |
ಧೀಮಂತ ಪರಸನ್ನ ವೆಂಕಟಪ್ರೀಯಾ [೩]
aLekallu hanumaMtarAyA ninna |
kAligeraguve salahenna jIyA [pa]
aMjanIsuta nI aMjikeyilladE |
BuMjisideMjalu yeDevOydu niMde ||
saMjIvarAya dhanaMjayagolidu |
prAMjvalarathanEri raMjisi merede [1]
aMgada modalAda maMgagaLoDagUDi |
raMgana aMganeyaLa huDukADi ||
laMGisi laMkeya aMgaLak hArutta |
BaMgisi rAvaNana jaMguLi muridi [2]
rAmanna nAmA nEmadi neneyutta |
kAmanna dUriTTa sOma nissImA ||
nEmisi kShaNadalli vyOmakke jigidA |
dhImaMta parasanna veMkaTaprIyA [3]
Leave a Reply