Composer : Shri Jagannatha dasaru
ನಾರಾಯಣಾದ್ರಿ ಕೃತವಾಸಾ ಶರಣು
ತೋರೈಯ್ಯ ತವರೂಪ ರವಿಕೋಟಿಭಾಸಾ | ಪ |
ಆನತ ಜನರಾಪ್ತ ನೀನೆಂದು ಕೇಳಿ ಮಿಗೆ
ಸಾನುರಾಗದಲಿ ನಡೆತಂದೆ ನಿನ್ನಯ ಬಳಿಗೆ
ಮೀನಾಂಕ ಜನಕ ತವ ಪದಯುಗಾರ್ಚನೆ ಹೀಗೆ
ಜ್ಞಾನ ಪೂರ್ವಕದಿ ದಯದಿಂದಲೆನಗೆ
ಪಾನೀಯ ಜಾಮ್ಬಕನೆ ಪೊರೆಯೆಂದೆ ನಿನಗೆ | ೧ |
ವಾಸುಕಿ ತಪಕೆ ಸಲೆ ಮೆಚ್ಚಿ ಗಿರಿಯಲಿ ನಿಂದೆ
ಆ ಸಲಿಲದೊಳು ನಿಂದ ಕರಿವರ ಕರೆಯೆ ಬಂದೆ
ವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆ
ಆ ಸಮರದೊಳಗೊಲಿವೆನೆಂದೆ ನಿನಗೆ
ಪಾಸಟಿ ಯಾರು ನೀರಜ ಭವನ ತಂದೆ | ೨ |
ಪೊಗಳಲರಿಯರು ಸುರರು ನಿನ್ನ ಮಹಿಮಾತಿಶಯ
ಬಗೆಯಲರಿಯಳು ಲಕುಮಿ ಬದರಿ ಸನ್ನಿಭಕಾಯ
ಮುಗ್ಧ ಮಾನವ ತಿಳಿವನೇನೊ ತಿರುಮಲರೆಯ
ಖಗರಾಜಗಮನ ಕಮನೀಯ ಪಾಹಿ
ಜಗನ್ನಾಥವಿಠಲ ವಿಗತೌಘ ಕವಿಗೇಯಾ | ೩ |
nArAyaNAdri kRutavAsA SaraNu
tOraiyya tavarUpa ravikOTiBAsA | pa |
Anata janarApta nIneMdu kELi mige
sAnurAgadali naDetaMde ninnaya baLige
mInAMka janaka tava padayugArcane hIge
j~jAna pUrvakadi dayadiMdalenage
pAnIya jAmbakane poreyeMde ninage | 1 |
vAsuki tapake sale mecci giriyali niMde
A saliladoLu niMda karivara kareye baMde
vAsavAtmajanu binnaise ninnaya muMde
A samaradoLagoliveneMde ninage
pAsaTi yAru nIraja Bavana taMde | 2 |
pogaLalariyaru suraru ninna mahimAtiSaya
bageyalariyaLu lakumi badari sanniBakAya
mugdha mAnava tiLivanEno tirumalareya
KagarAjagamana kamanIya pAhi
jagannAthaviThala vigatauGa kavigEyA | 3 |
Leave a Reply