Yellamma allave siridevi

Composer : Shri Prasannavenkata dasaru

By Smt.Shubhalakshmi Rao

ಯಲ್ಲಮ್ಮ ಅಲ್ಲವೆ ಸಿರಿದೇವಿ
ಎಲ್ಲಾರಮ್ಮನಲ್ಲವೆ [ಪ]

ಮುನಿಸಿಕೊಂಡು ಮನದಿನಿಯನೊಡನೆ |
ಮನೆಬಿಟ್ಟು ಬಂದಳಾಸನ್ನುತೆ ತನ್ನ ||
ತನಯರ ಧನಿ ಮನ್ನಿಸಿ ಮನ ಕರಗಿ |
ಇನ್ನೆಲ್ಲಿರದಿಲ್ಲಿ ನೆಲೆಸಿಹ ಜನನಿ [೧]

ಬೊಟ್ಟು ತನ್ನ ಬಾಯಲಿಟ್ಟು ಮಲಗಿ ಹರಿ |
ಸೃಷ್ಟಿಯ ಕಲ್ಪನೆ ಕಟ್ಟುತಲಿರಲು ನೀ ||
ಒಟ್ಟುಗೂಡಿ ವಟಪತ್ರಳಾಗಿ ತನ್ನ |
ದೃಷ್ಠಿ ನೆಟ್ಟಳಾ ಅಷ್ಠ ಸಂಪನ್ನೆ [೨]

ಉಧೋ ಉಧೋಯೆನ್ನುತ ಸದಮಲಮನದಿ |
ಹೃದಯ ತುಂಬಿ ಸದಾ ಆರಾಧಿಪರಿಗೆ ||
ವಿಧಿ ವಿಷ್ಣು ಶಿವರಲಿ ಅಧಿಕನೆನಿಪ ನಮ್ಮ |
ಮಧುರಿಪು ಪ್ರಸನ್ವೆಂಕಟ ಪದ ತೋರುವ [೩]


yallamma allave siridEvi
ellArammanallave [pa]

munisikoMDu manadiniyanoDane |
manebiTTu baMdaLAsannute tanna ||
tanayara dhani mannisi mana karagi |
innelliradilli nelesiha janani [1]

boTTu tanna bAyaliTTu malagi hari |
sRuShTiya kalpane kaTTutaliralu nI ||
oTTugUDi vaTapatraLAgi tanna |
dRuShThi neTTaLA aShTha saMpanne [2]

udhO udhOyennuta sadamalamanadi |
hRudaya tuMbi sadA ArAdhiparige ||
vidhi viShNu Sivarali adhikanenipa namma |
madhuripu prasanveMkaTa pada tOruva [3]

Leave a Reply

Your email address will not be published. Required fields are marked *

You might also like

error: Content is protected !!