Composer : Shri Jagannatha dasaru
ಎನ್ನಂಥ ಭಕ್ತರು ಆನಂತ ನಿನಗಿಹರು
ನಿನ್ನಂಥ ಸ್ವಾಮಿ ಎನಗಿಲ್ಲ |
ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ
ಭಿನ್ನೈಪೆ ನಿನ್ನಾ ಸಲಹೆಂದೂ ||
ಪತೀತನಾನಾದರು ಪತೀತಪಾವನ ನೀನು
ರತಿನಾಥ ಜನಕ ನಗಪಾಣಿ |
ರತಿನಾಥ ಜನಕ ನಗಪಾಣಿ ನೀನಿರಲು
ಇತರ ಚಿಂತ್ಯಾಕೋ ಎನಗಿನ್ನು ||
ಮನದೊಳಗೆ ನೀನಿದ್ದು
ಮನವೆಂದೆನಿಸಿಕೊಂಡು
ಮನದಾ ವೃತ್ತಿಗಳನ್ನು ಸೃಜಿಸುವಿ |
ಮನದಾ ವೃತ್ತಿಗಳನ್ನು ಸೃಜಿಸುವಿ
ಸಂಕರ್ಷಣನೆ, ನಿನ್ನ ಕರುಣಕ್ಕೆ ಎಣೆಗಾನೆ ||
ನಾನಾ ಪದಾರ್ಥದಲಿ ,ನಾನಾ ಪ್ರಕಾರದಲಿ
ನೀನಿದ್ದು ಜಗವಾ ನಡೆಸುವೀ |
ನೀನಿದ್ದು ಜಗವಾ ನಡೆಸುವೀ ಹರಿ ನೀನೆ
ನಾನೆಂಬೋ ನರಗೆ ಗತಿ ಉಂಟೆ ||
ಎನ್ನಪ್ಪ ,ಎನ್ನಮ್ಮ ,ಎನ್ನಯ್ಯ,ಎನ್ನಣ್ಣಾ
ಎನ್ನರಸ ಎನ್ನ ಕುಲದೈವಾ |
ಎನ್ನರಸ ಎನ್ನಾ ಕುಲದೈವಾ ಇಹಪರದಿ
ಎನ್ನಾ ಬಿಟ್ಟಗಲದೇ ಇರು ಕಂಡ್ಯಾ ||
ಅನಾಥ ಬಂದು ಜಗನ್ನಾಥ ವಿಠ್ಠಲ
ಪ್ರಪನ್ನ ಪರಿಪಾಲ ಮಾಲೋಲ |
ಪ್ರಪನ್ನ ಪರಿಪಾಲ ಮಾಲೋಲ ಹರಿ
ಪಾಂಚಜನ್ಯ ಧೃತಪಾಣಿ ಸಲಹೆಮ್ಮ ||
ennaMtha Baktaru AnaMta ninagiharu
ninnaMtha svAmi enagilla |
ninnaMtha svAmi enagilla adariMda
Binnaipe ninnA salaheMdU ||
patItanAnAdaru patItapAvana nInu
ratinAtha janaka nagapANi |
ratinAtha janaka nagapANi nIniralu
itara ciMtyAkO enaginnu ||
manadoLage nIniddu
manaveMdenisikoMDu
manadA vRuttigaLannu sRujisuvi |
manadA vRuttigaLannu sRujisuvi
saMkarShaNane, ninna karuNakke eNegAne ||
nAnA padArthadali ,nAnA prakAradali
nIniddu jagavA naDesuvI |
nIniddu jagavA naDesuvI hari nIne
nAneMbO narage gati uMTe ||
ennappa ,ennamma ,ennayya,ennaNNA
ennarasa enna kuladaivA |
ennarasa ennA kuladaivA ihaparadi
ennA biTTagaladE iru kaMDyA ||
anAtha baMdu jagannAtha viThThala
prapanna paripAla mAlOla |
prapanna paripAla mAlOla hari
pAMcajanya dhRutapANi salahemma ||
Leave a Reply