Composer : Shri Prasannavenkata dasaru
ಸ್ವರಮಣನ ರಮಣಿ ತ್ರಿವೇಣಿ |
ಸ್ಫುರಣ ಶ್ರೀಹರಿ ಚರಣಧಾರಿಣಿ [ಪ]
ಕಲುಷಾಪಹಾರಿಯೆ ಜಲಚರಾನ್ವೇಷಣಲುಬ್ದೆ |
ನಿಲಿಸೆನ್ನ ಹೃತ್ತೋಯಜದೊಳ್ ವಳ ಹೊರಗೂ |
ನಳಿನನಾಭನ ನೆನೆವ ತಿಳಿಚಿತ್ತ ನಿರ್ಮಲೆ |
ವಿಲಾಶೇಯಮಭಿಲಾಷಿಣಿ ಬುಧಶ್ರೇಣಿ [೧]
ಉದದಿರಾಜನತೀ ಪ್ರೀತಿಯಾ ಪುತ್ರಿ |
ಮದನಾರಿ ಜಟಜಸೂನೆ ಪಾಪೌಘ ದಹನೆ |
ಪದಾಬ್ಜ ಪದುಮಕೆನ್ನನು ಭ್ರಮರನೆನಿಸಿ |
ಉದದಿ ಮಥನನ ಪದ ಪದುಮವತೋರೆ [೨]
ಹರೀತೋಷಲಾಭೆ ಸುಂದರಿ ಸುಭಗೆ |
ದರುಶನ ಮಾತ್ರದಿ ತ್ರಿಕರಣ ಶುದ್ಧೀವೆ |
ಹಿರಿಪಿಂಗಳಾಧಿಷ್ಠಿತೆ ದೇವಿ ಜಗನ್ಮಾತೆ |
ತುರಗಗತಿ ಪ್ರಸನ್ವೆಂಕಟರಾಯನ್ನದಾಯಿತೆ [೩]
svaramaNana ramaNi trivENi |
sphuraNa SrIhari caraNadhAriNi [pa]
kaluShApahAriye jalacarAnvEShaNalubde |
nilisenna hRuttOyajadoL vaLa horagU |
naLinanABana neneva tiLicitta nirmale |
vilASEyamaBilAShiNi budhaSrENi [1]
udadirAjanatI prItiyA putri |
madanAri jaTajasUne pApauGa dahane |
padAbja padumakennanu Bramaranenisi |
udadi mathanana pada padumavatOre [2]
harItOShalABe suMdari suBage |
daruSana mAtradi trikaraNa SuddhIve |
hiripiMgaLAdhiShThite dEvi jaganmAte |
turagagati prasanveMkaTarAyannadAyite [3]
Leave a Reply