Neelavarnana Rani

Composer : Shri Prasannavenkata dasaru

By Smt.Shubhalakshmi Rao

ನೀಲವರ್ಣನ ರಾಣಿ ಲಲನಾಮಣಿ ತ್ರಿವೇಣಿ [ಪ]
ಕೋಲಪುರ ಸದನಿ ಪರಿಪಾಲಿಸೆನ್ನನು ಜನನಿ [ಅ.ಪ]

ಹೆಮ್ಮೊಗ ನಾಲ್ಮೊಗನು ಮೊಮ್ಮಗ ಮಹಾದೇವ |
ಅಮರೇಂದ್ರ ಸಹಿತ ಸುರರೆಲ್ಲರಿಗೆ ಹೆಮ್ಮೆಯಲಿ ||
ಅಮ್ಮಹ ದೈವಾ ನಿನ್ನ ಪತಿ ಪ್ರೇಮ ಕೊಡಿಸಿದೆ |
ಯೆಮ್ಮೊಳೇತಕೆ ಇಂದು ದಯಬಾರದಮ್ಮಾ [೧]

ತರಣಿ ಹರಿಣಾಂಕರನು ಧರಿಪ ಚರಣವನು |
ಸುರನದಿ ಜನಕನತೀ ಪಿರುತಿಯಲ್ಲಿ ಸೇವಿಸುವೆ |
ಶಿರಕರ ಚರಣಂಗಳ ಚೇಷ್ಟಿಪರಿ ವ್ಯಾಪಾರ ಸುಖ |
ಸುರಿಸಿ ನಿನ್ನವರನಾತುಕೊ ಬಾರದೇಕಮ್ಮಾ [೨]

ಸ್ವಾಂಗಾಯನಾಮನರ್ಧಾಂಗಿ ಶುಭಾಂಗಿ |
ಅಂಗಲಾಚಿ ಬೇಡುವೆ ನಿನ್ನಂತರಂಗದಿಹ |
ತುಂಗವಿಕ್ರಮ ಸಿರಿ ಪ್ರಸನ್ವೆಂಕಟರಂಗನ್ನ |
ಕಂಗಳು ದಣಿವ ತೆರ ತೋರೆ ಹೃನ್ಮಂಗಳೆ [೩]


nIlavarNana rANi lalanAmaNi trivENi [pa]
kOlapura sadani paripAlisennanu janani [a.pa]

hemmoga nAlmoganu mommaga mahAdEva |
amarEMdra sahita surarellarige hemmeyali ||
ammaha daivA ninna pati prEma koDiside |
yemmoLEtake iMdu dayabAradammA [1]

taraNi hariNAMkaranu dharipa caraNavanu |
suranadi janakanatI pirutiyalli sEvisuve |
Sirakara caraNaMgaLa cEShTipari vyApAra suKa |
surisi ninnavaranAtuko bAradEkammA [2]

svAMgAyanAmanardhAMgi SuBAMgi |
aMgalAci bEDuve ninnaMtaraMgadiha |
tuMgavikrama siri prasanveMkaTaraMganna |
kaMgaLu daNiva tera tOre hRunmaMgaLe [3]

Leave a Reply

Your email address will not be published. Required fields are marked *

You might also like

error: Content is protected !!