KeLi pelamma

Composer : Shri Indiresha ankita

By Smt.Shubhalakshmi Rao

ಕೇಳಿ ಪೇಳಮ್ಮ ನಮ್ಮಮ್ಮ ಲಕುಮೀ |ಪ|

ಕೇಳಿ ಪೇಳೆ ಹರಿಯಲಿ ಪೋಗಿ ಬಹಳ ಸೋಕಿನವ ಗೋಪಿ
ಬಾಲೀಯರಿಗೆ ಮೆಚ್ಚಿ ಬಹು ಜಾಲವ ಮಾಡಿದ ಕೃಷ್ಣನ |ಅ.ಪ|

ಪ್ರಳಯ ಕಾಲದಲ್ಲಿ ಆಲದೆಲೆ ಮೇಲೆ ಮಲಗಿಪ್ಪನು
ಒಲುಮಿಗಳ ಒಲುಮಿಕಾಂತ ಲಲನೆ ನೀನು ಕಮಲಾದೇವಿ |೧|

ನಿತ್ಯಮುಕ್ತೆ ನಿತ್ಯತೃಪ್ತೆ ನಿತ್ಯಾವಿಯೋಗಿನಿ ಹರಿಗೆ
ಭೃತ್ಯನಲ್ಲೆ ನಾನು ಸ್ವಲ್ಪ ಚಿತ್ತವಿಟ್ಟು ನೋಡೆ ತಾಯಿ |೨|

ನಿನ್ನ ಹೊರತು ಆತನನ್ನು ತೋರುವರ ಕಾಣೆನಮ್ಮ
ಸನ್ನುತಾಂಗಿ ಸಾರಸಾಕ್ಷಿ ಎನ್ನೊಳು ಕರುಣವ ಮಾಡೇ |೩|

ಎಲ್ಲ ದಿವಿಜರಲ್ಲಿ ಪೋಗೆ ಬಲುಬಗೆ ಪೇಳಿಕೊಂಡೆ
ಫುಲ್ಲನಾಭನಲ್ಲಿ ಒಂದು ಸೊಲ್ಲನಾಡೋ ಶಕ್ತಿಯಿಲ್ಲ |೪|

ವಾರಿಜಾಕ್ಷಿ ನಿನ್ನ ಪಾದ ಬಾಲ್ಯದಿಂದ ಸೇರಿದ್ದಕ್ಕೆ
ನೀರಜಾಕ್ಷನನ್ನು ತೋರೆ ಭಾರಿ ಫಲವಾಯಿತೆಂಬೆ |೫|

ನಿಮ್ಮ ಮಾತು ಮೀರ ಶೂರ ನಮ್ಮ ಮಾರಜನಕ ಕೃಷ್ಣ
ಅಮರ ತರುವ ಕಿತ್ತಿ ನಿಮ್ಮ ಮನೆಯೊಳ ಹಚ್ಚಿದನಂತೆ |೬|

ಸುಂದರಿ ಸೌಭಾಗ್ಯವಂತೆ ಮಂದಿರದೋ-ಳಿಪ್ಪನನ್ನು
ಇಂದಿರೇಶನನ್ನು ತೋರೆ ನಂದ ಬಾಲ ಮಹಿಳೆ ಅಂಬಾ |೭|


kELi pELamma nammamma lakumI |pa|

kELi pELe hariyali pOgi bahaLa sOkinava gOpi
bAlIyarige mecci bahu jAlava mADida kRuShNana |a.pa|

praLaya kAladalli Aladele mEle malagippanu
olumigaLa olumikAMta lalane nInu kamalAdEvi |1|

nityamukte nityatRupte nityAviyOgini harige
BRutyanalle nAnu svalpa cittaviTTu nODe tAyi |2|

ninna horatu Atanannu tOruvara kANenamma
sannutAMgi sArasAkShi ennoLu karuNava mADE |3|

ella divijaralli pOge balubage pELikoMDe
PullanABanalli oMdu sollanADO Saktiyilla |4|

vArijAkShi ninna pAda bAlyadiMda sEriddakke
nIrajAkShanannu tOre BAri PalavAyiteMbe |5|

nimma mAtu mIra SUra namma mArajanaka kRuShNa
amara taruva kitti nimma maneyoLa haccidanaMte |6|

suMdari sauBAgyavaMte maMdiradO-Lippanannu
iMdirESanannu tOre naMda bAla mahiLe aMbA |7|

Leave a Reply

Your email address will not be published. Required fields are marked *

You might also like

error: Content is protected !!