Composer : Shri Prasannavenkata dasaru
ಜಗಪತಿಯ ತೋರಿ ಭವದಘ ತರಿವಳೆ ಮಹಾಮಹಿಮಳೆ [ಪ]
ಮುಗಿವೆ ಕರಗಳ ನಿನ್ನ ಚರಣಕೆ ಹರಸು ಭಕುತ ವಿಧಾತೃಳೆ [ಅ.ಪ.]
ಕಡಗ ಗಗ್ಗರಿಗೆಜ್ಜೆ ಘಿಲುರೆಂಬೊ ನಾದದಿ ಆನಂದದಿ |
ನಡೆದು ಬಹ ಇಮ್ಮಡಿಯ ಪ್ರಭೆ ನಿನ್ನಡಿಗೆ ಯೆರಗುವೆ ದೈನ್ಯದಿ [೧]
ಸುರನದಿ ಜನಕನ್ನ ಅತೀ ಪಿರುತಿಯಲ್ಲಿ ಸೇವಿಸಿ ಧನ್ಯಳೆನಿಸಿ |
ಮೆರೆವ ಭಾಗ್ಯದ ಒಡತಿ ನಿನಗೆಣೆಯಾರುಯಿಲ್ಲಿ ಧರೆಯಲಿ [೨]
ತರಣಿ ಹರಿಣಾಂಕರನು ದಿನದಿನ ಹರಣಮಾಡುವ ಚರಣವ |
ತರುಣಿ ನೀ ನಿರುತದಲಿ ತೊಳೆದು ಭರಣ ಮಾಡುವಿ ಮನದೊಳು [೩]
ಶಾನು ನೇತ್ರನ ತಾತ ನಾಲ್ಮೊಗನಯ್ಯ ಸುರನರದೇವನಂಘ್ರಿಯಾ
ಸಾನುರಾಗದಿ ಪೂಜಿಸುತ ಬಲು ಹರುಷ ಪಡುವ ಹರಿಪ್ರಿಯಾ [೪]
ಮಾನಿಸಾದೆಯಿಂದು ಈ ನಿನ್ನ ತನಯರಭಿಲಾಷೆಯು ಮನಕೆ |
ಚೆನ್ನ ಮಾನಿಸರೂಪ ಸಿರಿ ಪ್ರಸನ್ವೆಂಕಟನ ಗೃಹನಾಯಕೆ [೫]
jagapatiya tOri BavadaGa tarivaLe mahAmahimaLe [pa]
mugive karagaLa ninna caraNake harasu Bakuta vidhAtRuLe [a.pa.]
kaDaga gaggarigejje GilureMbo nAdadi AnaMdadi |
naDedu baha immaDiya praBe ninnaDige yeraguve dainyadi [1]
suranadi janakanna atI pirutiyalli sEvisi dhanyaLenisi |
mereva BAgyada oDati ninageNeyAruyilli dhareyali [2]
taraNi hariNAMkaranu dinadina haraNamADuva caraNava |
taruNi nI nirutadali toLedu BaraNa mADuvi manadoLu [3]
SAnu nEtrana tAta nAlmoganayya suranaradEvanaMghriyA
sAnurAgadi pUjisuta balu haruSha paDuva haripriyA [4]
mAnisAdeyiMdu I ninna tanayaraBilASheyu manake |
cenna mAnisarUpa siri prasanveMkaTana gRuhanAyake [5]
Leave a Reply