Composer : Shri Harapanahalli Bheemavva
ಏನಂತಿ ಕಮಲನಾಭನ ಪ್ರಿಯಳೆ
ಜಗ-ದಾನಂತ ಪದುಮನಾಭನ ಭಾರ್ಯಳೆ [ಪ]
ಕ್ಷೀರ ಸಾಗರತನುಜೆ ಸಿರಿ ಎನ್ನ ಮೊರೆ ಕೇಳೆ
ಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆ
ಬುದ್ಧಿ ಪೂರ್ವಕವಾಗಿ ಭುವನದೊಡೆಯನ
ಪಾದ-ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ [೧]
ಜನಕಾತ್ಮಜಳೆ ನೀ ಜಗದೇಕ ಸುಂದರಿ
ಜಗದಾಧಿಪತಿ ವಕ್ಷಸ್ಥಳ ಆಶ್ರಯಳೆ ಕೃತಿ
ಸರ್ವಮಂಗಳಕಾರಿ ಪರಮ ಕರುಣದಿ ನೋಡೆ
ವರಲಕ್ಷ್ಮಿ ದಯಮಾಡೆ ವರಗಳನೀಡ್ಯಾಡೆ [೨]
ಭೀಷ್ಮಕನ ಪುತ್ರಿ ಬಿರುದೇನೆ ಸರಸಿಜ ನೇತ್ರೆ
ಮೃಡ ಬ್ರಹ್ಮರೊಡೆಯ ಭೀಮೇಶ ಕೃಷ್ಣನ ಮಿತ್ರೆ
ಪೊಡವಿಗಧಿಕಳೆ ಜಯ ಮೂಡಲಗಿರಿವಾಸಿ
ಬಿಡದೆ ಕೈ ಹಿಡಿದೆನ್ನ ಕಡೆ ಹಾಯ್ಸೆ ಕಮಲಾಕ್ಷಿ [೩]
EnaMti kamalanABana priyaLe
jaga-dAnaMta padumanABana BAryaLe [pa]
kShIra sAgaratanuje siri enna more kELe
siddhavAgenag~hELe Suddha mArgava tOre
buddhi pUrvakavAgi BuvanadoDeyana
pAda-padmadallAsakte buddhi kELuve SAMti [1]
janakAtmajaLe nI jagadEka suMdari
jagadAdhipati vakShasthaLa ASrayaLe kRuti
sarvamaMgaLakAri parama karuNadi nODe
varalakShmi dayamADe varagaLanIDyADe [2]
BIShmakana putri birudEne sarasija nEtre
mRuDa brahmaroDeya BImESa kRuShNana mitre
poDavigadhikaLe jaya mUDalagirivAsi
biDade kai hiDidenna kaDe hAyse kamalAkShi [3]
Leave a Reply