Baare bhagyadarasi

Composer : Shri Prasannavenkata dasaru

By Smt.Shubhalakshmi Rao

ಬಾರೇ ಭಾಗ್ಯದರಸಿ | ಭವದಘ ಹರಿಸಿ |
ಹರಸು ಬಾ ಹರಿಚರಣ ತೋರಿಸಿ [ಪ]

ಜಾಂಬೂನದಾಂಬರದೋಳ್ ಪೊಳೆವಂಭ್ರಣಿ |
ಶಂಭೋ ಸುರರಿಂಬಿಡುವ ಸಂಭ್ರಮಿ |
ಅಂಬುಜ ಸಂಭವ ಪೊಂಬನ ಜನನಿ |
ಇಂಬುದೋರು ಕುಂಬಿಣಿಜಾಮಣಿ [೧]

ಮನ್ಮಥ ಜನಕನನ್ಯ ಭಜಿಪಗುಣ |
ಸನ್ನುತ ರೂಪ ಕೊಂಡಾಡಿ ಪಾಡುವಗೆ |
ಹೃನ್ಮನದೋಳಿಹ ಬಿಂಬಮೂರ್ತಿಯಾ |
ಕಣ್ಮನ ಸೆಳೆವಂತೆ ತೋರಿ ಪೊರೆಯೆಯಾ [೨]

ದಯವಾರುಧಿ ಭವ ಭಯ ದೂರಿರಿಸಲು |
ದಯ ಮಾಡಿಸೆ ಈ ಕ್ಷಣ ವೊಲ್ಲೆನ್ನದೆ |
ಕಾಯಜ ಪಿತ ಪ್ರಸಂವೆಕಟರಾಯನ |
ಜಾಯ ಜಗದಭಿಮಾನಿಯೆ ತಾಯೆ [೩]


bArE BAgyadarasi | BavadaGa harisi |
harasu bA haricaraNa tOrisi [pa]

jAMbUnadAMbaradOL poLevaMBraNi |
SaMBO surariMbiDuva saMBrami |
aMbuja saMBava poMbana janani |
iMbudOru kuMbiNijAmaNi [1]

manmatha janakananya BajipaguNa |
sannuta rUpa koMDADi pADuvage |
hRunmanadOLiha biMbamUrtiyA |
kaNmana seLevaMte tOri poreyeyA [2]

dayavArudhi Bava Baya dUririsalu |
daya mADise I kShaNa vollennade |
kAyaja pita prasaMvekaTarAyana |
jAya jagadaBimAniye tAye [3]

Leave a Reply

Your email address will not be published. Required fields are marked *

You might also like

error: Content is protected !!