Composer : Shri Prasannavenkata dasaru
ಅಚ್ಯುತನ್ನ ರಾಣಿಯೆ ತ್ವಚ್ಛರಣಕೆರಗಿ ಬೇಡುವೆ [ಪ]
ದುಃಚ್ಚರಿತಗಳಳಿಸಿ ಮನದೀಚ್ಛೇ ಪೂರ್ಣಗೊಳಿಸಿ ಪೊರೆ [ಅ.ಪ.]
ಪತಿಯತೊಡೆಯನೇರಿ ತ್ವರದೆ ಕಡುಕೋಪ ಶಾಂತಗೊಳಿಸಿದೆ |
ಪತಿತರನ್ನುದ್ಧರಿಸ ಬಂದ ಪುನ್ನವ ಪುರವಾಸಿನೆ (೧)
ಅಂಬುಜಾಂಬಕೆ ಭವಾಂಬುದ ಕಳೆದಿಂಬಿಡುವಾ ಅಂಬಿಕೆ |
ಅಂಬುಜಾರಿ ಭಗಿನಿ ನಿಜ ಜಾಂಬವ ಸುತೆ ನಂಬಿರುವೆ (೨)
ಜ್ಞಾತೃನಾಮಕ ಹರಿಯ ಸ್ತೋತ್ರಗೈಯ್ಯುತಾ ನಿರುತ |
ಚಿತ್ರಚರಿತಗ್-ಹತ್ತಿರಾದ ಸುಚರಿತ್ರೆ ಲೋಕಪವಿತ್ರೆ (೩)
ಕಂದನಾಡುತ ಬರಲು ಬಂದು ಬಿಗಿದಪ್ಪೊ ಜನನಿಯಂತೆ |
ಇಂದು ನೀನು ಮಂದಹಾಸದಿ ಮುಂದೆ ಬಾರೆಯೇಕೆ ತಾಯೆ (೪)
ಪೌಲಮೀಗತೆಪಾಲಜನ್ನೆ ಕೋಲನೊರಸಿ ಮೆರೆದರನ್ನೆ |
ಬಲಪ್ರಸನ್ವೆಂಕಟನೊಲಿಸಿ ಕೋಲಪುರದಿ ನೆಲೆಸಿದ ಘನ್ನೆ (೫)
acyutanna rANiye tvacCaraNakeragi bEDuve [pa]
duHccaritagaLaLisi manadIcCE pUrNagoLisi pore [a.pa.]
patiyatoDeyanEri tvarade kaDukOpa SAMtagoLiside |
patitarannuddharisa baMda punnava puravAsine (1)
aMbujAMbake BavAMbuda kaLediMbiDuvA aMbike |
aMbujAri Bagini nija jAMbava sute naMbiruve (2)
j~jAtRunAmaka hariya stOtragaiyyutA niruta |
citracaritag-hattirAda sucaritre lOkapavitre (3)
kaMdanADuta baralu baMdu bigidappo jananiyaMte |
iMdu nInu maMdahAsadi muMde bAreyEke tAye (4)
paulamIgatepAlajanne kOlanorasi meredaranne |
balaprasanveMkaTanolisi kOlapuradi nelesida Ganne (5)
Leave a Reply