Vatsale vandipe

Composer : Shri Prasannavenkata dasaru

By Smt.Shubhalakshmi Rao

ವತ್ಸಲೆ ವಂದಿಪೆ ವರಮಹಾಲಕುಮಿ [ಪ]

ವತ್ಸ ನಿನ್ನವನೆಂದು ಭಕ್ತವತ್ಸಲ ಹರಿಯಾ |
ಚಿತ್ಸುಖ ಕರುಣಿಸು ತಾತ್ಸಾರ ಮಾಡದೆ [ಅ.ಪ]

ಶ್ರವಣವೇ ಸಕಲಾದಿ ನವವಿಧ ಭಕುತಿಯ
ನವನೀತದಂತೆ ನೀನಿತ್ತು ಭವಜರಿಗೆ
ಭಾವಜನಯ್ಯನ ಭವಾವಿಭವ ತವ |
ಠಾವನರಿತು ಸದಾ ಸೇವೆಗೈಯ್ಯುವಾ [೧]

ಮಾಲೋಲೆ ಮಹಾಪ್ರಳಯಕಾಲದೆ |
ಆಲದೆಲೆಯಾಗಿ ನೀರಲ್ಲಿ ತೇಲಿದೆ
ಪಾಲ್ಗಡಲಲುದಿಸಿ ಹರಿಯ ವಲಿಸಿ |
ನಲಿದೆ ಸಕಲಕೆ ಸೌಭಾಗ್ಯಳೆನಿಸಿ [೨]

ಗಜಗಂಹರೆ ಅಜಮನಸಿಜ ಜನನಿ |
ಪೂಜ್ಯ ಪುರಂದರ ದಾಸರ ಕರುಣಿ
ಗಜವರದ ಗಂಭೀರ ಅಹಿರಾಜಶಯನ ಭೂ
ಭುಜಃ ಪ್ರಸನ್ವೆಂಕಟನ ನಿಜ ರಾಣಿ [೩]


vatsale vaMdipe varamahAlakumi [pa]

vatsa ninnavaneMdu Baktavatsala hariyA |
citsuKa karuNisu tAtsAra mADade [a.pa]

SravaNavE sakalAdi navavidha Bakutiya
navanItadaMte nInittu Bavajarige
BAvajanayyana BavAviBava tava |
ThAvanaritu sadA sEvegaiyyuvA [1]

mAlOle mahApraLayakAlade |
AladeleyAgi nIralli tElide
pAlgaDalaludisi hariya valisi |
nalide sakalake sauBAgyaLenisi [2]

gajagaMhare ajamanasija janani |
pUjya puraMdara dAsara karuNi
gajavarada gaMBIra ahirAjaSayana BU
BujaH prasanveMkaTana nija rANi [3]

Leave a Reply

Your email address will not be published. Required fields are marked *

You might also like

error: Content is protected !!