Composer : Shri Purandara dasaru
ಶ್ರೀ ವರಲಕ್ಷ್ಮೀ ದೇವಿ [ಪ]
ಸೌಭಾಗ್ಯವೀಯೆ ಸದಯೆ
ಸಾಯುಜ್ಯ ವೀಯೆ ಜನನೀ |
ಸಕಲ ಲೋಕಕೆ ಸಾಕ್ಷಿಯಾಗಿರುವ ತಾಯೆ ದೇವೀ ||೧||
ಶ್ರಾವಣ ಶುಕ್ರವಾರ ದಿನದಲಿ |
ಸಕಲಾಭೀಷ್ಟವನೀಯೆ ಶರಣಾಗತರನು
ಕರುಣದಿ ಕಾಯಲು ಬಾ ಬಾ ತಾಯೇ ದೇವೀ || ೨ ||
ಕೊಲ್ಹಾಪುರದಲಿ ನೆಲೆಸಿ ಸಲ್ಲೀಲೆಯಿಂದಲಿ ಇರುವಾ
ಪರಮಪುರುಶ ಶ್ರೀ ಪುರಂದರವಿಠಲನಾ
ರಾಣಿ, ಬಾ ಬಾ ದೇವೀ ತಾಯೇ || ೩ ||
SrI varalakShmI dEvi [pa]
sauBAgyavIye sadaye
sAyujya vIye jananI |
sakala lOkake sAkShiyAgiruva tAye dEvI ||1||
SrAvaNa SukravAra dinadali |
sakalABIShTavanIye SaraNAgataranu
karuNadi kAyalu bA bA tAyE dEvI || 2 ||
kolhApuradali nelesi sallIleyiMdali iruvA
paramapurusha SrI puraMdaraviThalanA
rANi, bA bA dEvI tAyE || 3 ||
Leave a Reply