Composer : Shri Vijayadasaru
ರಾಗ :ಹಿಂದೋಳ , ಆದಿತಾಳ
ಶ್ರೀಮಹಾಲಕುಮಿದೇವಿಯೇ ಕೋಮಲಾಂಗಿಯೇ ।
ಸಾಮಗಾಯನಪ್ರಿಯೇ ॥ ಪ ॥
ಹೇಮಗರ್ಭ ಕಾಮಾರಿ ಶಕ್ರ ಸುರ – ।
ಸ್ತೋಮವಂದಿತಳೆ ಸೋಮ ಸೋದರಿಯೆ ॥ ಅ ಪ ॥
ಬಟ್ಟುಕುಂಕುಮನೊಸಲೊಳೇ । ಮುತ್ತಿನ ಹೊಸ ।
ಕಠ್ಠಾಣಿತ್ರಿವಳಿಕೊರಳೊಳೇ ।
ಇಟ್ಟ ಪೊನ್ನೋಲೆಕಿವಿಯೋಳೇ ಪವಳದ ಕೈಯ ।
ಕಟ್ಟುಕಂಕಣ ಕೈಬಳೆ ॥
ತೊಟ್ಟ ಕುಪ್ಪುಸ ಬಿಗಿದುಟ್ಟ ಪೀತಾಂಬರ ।
ಘಟ್ಟಿ ವಡ್ಯಾಣ ಕಾಲಂದಿಗೆ ರುಳಿ ಗೆಜ್ಜೆ ।
ಬೆಟ್ಟಿಲಿ ಪೊಳೆವುದು ಮೇಂಟಿಕೆ ಕಿರುಪಿಲ್ಲಿ ।
ಇಟ್ಟು ಶೋಭಿಸುವ ಅಷ್ಟಸಂಪನ್ನೆ ॥ 1 ॥
ಸಕಲಶುಭಗುಣಭರಿತಳೆ । ಏಕೋದೇವಿಯೆ ।
ವಾಕುಲಾಲಿಸಿ ನೀ ಕೇಳೆ ।
ನೋಕನೀಯನ್ನ ಮಹಲೀಲೆ ಕೊಂಡಾಡುವಂಥ ।
ಏಕಮನವ ಕೊಡು ಶೀಲೆ ॥
ಬೇಕು ಬೇಕು ನಿನ್ನ ಪತಿಪದಾಬ್ಜವ ।
ಏಕಾಂತದಿ ಪೂಜಿಪರ ಸಂಗವ ಕೊಡು ।
ಲೋಕದ ಜನರಿಗೆ ನಾ ಕರವೊಡ್ಡದಂತೆ ।
ನೀ ಕರುಣಿಸಿ ಕಾಯೆ ರಾಕೆಂದುವದನೆ ॥ 2 ॥
ಮಂದರೋದ್ಧರನರಸಿಯೆ । ಇಂದಿರೆ ಎನ್ನ ।
ಕುಂದುದೋಷಗಳಳಿಯೆ ।
ಅಂದ ಸೌಭಾಗ್ಯದ ಸಿರಿಯೆ ತಾಯೇ ನಾ ನಿನ್ನ ।
ಕಂದನು ಮುಂದಕ್ಕೆ ಕರೆಯೆ ॥
ಸಿಂಧುಶಯನ ಸಿರಿ ವಿಜಯವಿಟ್ಠಲರೇಯ ।
ಎಂದೆಂದಿಗೆ ಮನದಿಂದಗಲದೆ ಆ – ।
ನಂದದಿಂದಲಿ ಬಂದು ಮುಂದೆ ಕುಣಿಯುವಂತೆ ।
ವಂದಿಸಿ ಪೇಳಮ್ಮ ಸಿಂಧುಸುತೆಯಳೆ ॥ 3 ॥
SrI vijayadAsara kRuti ,rAga :hiMdOLa , AditALa
SrImahAlakumidEviyE kOmalAMgiyE |
sAmagAyanapriyE || pa ||
hEmagarBa kAmAri Sakra sura – |
stOmavaMditaLe sOma sOdariye || a pa ||
baTTukuMkumanosaloLE | muttina hosa |
kaThThANitrivaLikoraLoLE |
iTTa ponnOlekiviyOLE pavaLada kaiya |
kaTTukaMkaNa kaibaLe ||
toTTa kuppusa bigiduTTa pItAMbara |
GaTTi vaDyANa kAlaMdige ruLi gejje |
beTTili poLevudu mEMTike kirupilli |
iTTu SOBisuva aShTasaMpanne || 1 ||
sakalaSuBaguNaBaritaLe | EkOdEviye |
vAkulAlisi nI kELe |
nOkanIyanna mahalIle koMDADuvaMtha |
Ekamanava koDu SIle ||
bEku bEku ninna patipadAbjava |
EkAMtadi pUjipara saMgava koDu |
lOkada janarige nA karavoDDadaMte |
nI karuNisi kAye rAkeMduvadane || 2 ||
maMdarOddharanarasiye | iMdire enna |
kuMdudOShagaLaLiye |
aMda sauBAgyada siriye tAyE nA ninna |
kaMdanu muMdakke kareye ||
siMdhuSayana siri vijayaviTThalarEya |
eMdeMdige manadiMdagalade A – |
naMdadiMdali baMdu muMde kuNiyuvaMte |
vaMdisi pELamma siMdhusuteyaLe || 3 ||
Leave a Reply