Composer : Shri Gopala dasaru
ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿ
ಶ್ರೀಮಂತ ವಿಷ್ಣು ವಾ-ಮಾಂಕ ಸದನಿ [ಪ]
ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ
ವಿನುತೆ ಹೇ ಸೋಮ ಸಹೋದರಿ [ಅ.ಪ]
ಗುಣತ್ರಯಾತ್ಮಕ ಚೂಲಿಯನು ಅಲಂಕರಿಸಿ
ವನಜಭವಾಂಡ ಪಾತ್ರೆಯನಲ್ಲಿರಿಸಿ |
ಗಣನೆಯಿಲ್ಲದ ಜೀವ ಧಾನ್ಯ ತುಂಬಿರಿಸಿ
ಜನರ ಯೋಗ್ಯತೆ ಉದಕವನಲ್ಲಿ ಬೆರೆಸಿ |
ಮಿನುಗುವ ಕರ್ಮ ಇಂಧನ ಕಾಲವೆ ಮಹಾ
ಅನಳ ಜನರ ಸಾಧನವೆಂಬ ದರ್ವಿಲಿ |
ಇನಿತು ಪಾಕವ ಮಾಡಿ ಘನಮಹಿಮನ ಭೋ-
ಜನಕನುಕೂಲ ಮಾಡ್ದ ವನರುಹ ನಯನೆ [೧]
ನಿಲಯಶಯ್ಯ ತಾಂಬೂಲಾಯುಧ ಚೈಲ
ಜಲಜ ಮಂದಾರ ಚಂಪಕ ಮಲ್ಲೆ ಬಕುಳ
ತುಲಸಿ ಕೇತಕಿ ದಿವ್ಯ ಗಂಧ ಪರಿಮಳ
ವಲಯ ಕಿರೀಟ ಕುಂಡಲ ರತ್ನ ಮಾಲೆ |
ಹೊಳೆವ ಸುನವನವ ಕಳೇವರ ಕೊಳುತಲಿ
ಹಲವು ವಿಧಾರ್ಚನೆಗಳಲಿ ಪತಿಯನು |
ವಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದ
ಬಲು ಸುಖ ಜಲನಿಧೆ ಸಲಹೆ ನಮಿಸುವೆ [೨]
ಕಮಲ ಕುಟ್ಮಲರದನ-ದಭಯ ಸುಪಾಣಿ
ವಿಮಲ ಸುಧಾಕರ ನಿಭ ಶುಭ ವದನೆ
ಭ್ರಮರ ಕುಂತಳೆ ಹೇಮಾಂಬರ ಚಾರು ಶ್ರೋಣಿ
ಅಮಿತ ಸುಗುಣೆ ಶೋ-ಭಿತ ಅಬ್ಜ ಸದನೆ |
ತಮಹಾರಿ ಗೋಪಾಲವಿಠಲನರ್ಧಾಂಗಿಯೆ
ಸಮರೂಪ ಸಮಕಾಲ ಸಮದೇಶ ವ್ಯಾಪುತೆ
ರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-
ಶಮಲವಳಿದು ಹೃತ್ಕಮಲದಿ ಹರಿತೋರೆ [೩]
SrI mahAlakShmI mAte triBuvana janani
SrImaMta viShNu vA-mAMka sadani [pa]
tAmarasAsana vyOmALaka sura-stOma
vinute hE sOma sahOdari [a.pa]
guNatrayAtmaka cUliyanu alaMkarisi
vanajaBavAMDa pAtreyanallirisi |
gaNaneyillada jIva dhAnya tuMbirisi
janara yOgyate udakavanalli beresi |
minuguva karma iMdhana kAlave mahA
anaLa janara sAdhanaveMba darvili |
initu pAkava mADi Ganamahimana BO-
janakanukUla mADda vanaruha nayane [1]
nilayaSayya tAMbUlAyudha caila
jalaja maMdAra caMpaka malle bakuLa
tulasi kEtaki divya gaMdha parimaLa
valaya kirITa kuMDala ratna mAle |
hoLeva sunavanava kaLEvara koLutali
halavu vidhArcanegaLali patiyanu |
valisi vallaBana tOLali bigidappida
balu suKa jalanidhe salahe namisuve [2]
kamala kuTmalaradana-daBaya supANi
vimala sudhAkara niBa SuBa vadane
Bramara kuMtaLe hEmAMbara cAru SrONi
amita suguNe SO-Bita abja sadane |
tamahAri gOpAlaviThalanardhAMgiye
samarUpa samakAla samadESa vyApute
rame anupame same namisuve enna Bava-
SamalavaLidu hRutkamaladi haritOre [3]
Leave a Reply