Composer : Shri Purandara dasaru
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ||ಪ||
ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ
ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ||
ವೇದಾಭಿಮಾನಿನಿ ಸಾರಸಾಕ್ಷಿ
ಶ್ರೀಧರನ ರಮಣಿ
ಕಾದುಕೋ ನಿನ್ನಯ ಪಾದ ಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ |೧|
ದಯದಿಂದ ನೋಡೆ ಭಜಿಪ ಭಕ್ತರ
ಭಯ ದೂರ ಮಾಡೆ
ದಯ ಪಾಲಿಸೆ ಮಾತೆ ತ್ರೈಲೋಖ್ಯ ವಿಖ್ಯಾತೆ
ಜಯದೇವಿ ಸುವ್ರತೆ ಹಯವದನನ ಪ್ರೀತೆ |೨|
ನೀನಲ್ಲದನ್ಯ ರಕ್ಷಿಪರನು
ಕಾಣೆ ನಾ ಮುನ್ನ
ದಾನವಾಂತಕ ಸಿರಿಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ |೩|
pAlise enna SrImahAlakShmi ||pa||
pAlise ennanu pAlAbdhi saMjAte
lalitAMgi SuBe dEvi maMgaLe dEvi ||a||
vEdABimAnini sArasAkShi
SrIdharana ramaNi
kAdukO ninnaya pAda sEvakarannu
AdiSakti sarvAdhAre guNapUrNe |1|
dayadiMda nODe Bajipa Baktara
Baya dUra mADe
daya pAlise mAte trailOKya viKyAte
jayadEvi suvrate hayavadanana prIte |2|
nInalladanya rakShiparanu
kANe nA munna
dAnavAMtaka siripuraMdaraviThalana
dhyAnipa Bakutara mAna ninnadu tAye |3|
Leave a Reply