Komale Ramaa deviya

Composer : Shri Gopala dasaru

Smt.Viraja

ಕೋಮಲೆ ರಮಾದೇವಿಯ ನೋಡಬನ್ನಿರೇ
ಕಮಲಾರಿ ಸಹೋದರಿಯನೀಗ ಬೇಡಬನ್ನಿರೇ ||ಪ||

ಇಂದುನಿಭದ ಸುಂದರಿಯರು ಬಂದು ನೋಡಿರೆ
ಈ ಕುಂದರದನೆ ಮಂದರೋದ್ಧರನರ್ಧಾಂಗಿಯೇ ||೧||

ಭಕ್ತಿಯಿಂದ ಭಜಿಪರಿಗೆ ಮುಕ್ತಿ ಕೊಡುವಳೇ
ಶಕ್ತಿ ಯುಕ್ತಿಗಳನೆ ಕೊಟ್ಟು ಅರ್ತಿ ಮಾಳ್ಪಲೇ ||೨||

ದಾಸರಾದರೆ ಶ್ರೀಶನ ರಾಣಿ ಪೋಷಿಸುವಳೇ
ಗೋಪಾಲವಿಠಲ ಘಾಸಿಮಾಡದೆ ಪೋಷಿಸೆನ್ನುವಳೇ ||೩||


kOmale ramAdEviya nODabannirE
kamalAri sahOdariyanIga bEDabannirE ||pa||

iMduniBada suMdariyaru baMdu nODire
I kuMdaradane maMdarOddharanardhAMgiyE ||1||

BaktiyiMda Bajiparige mukti koDuvaLE
Sakti yuktigaLane koTTu arti mALpalE ||2||

dAsarAdare SrISana rANi pOShisuvaLE
gOpAlaviThala GAsimADade pOShisennuvaLE ||3||

Leave a Reply

Your email address will not be published. Required fields are marked *

You might also like

error: Content is protected !!