Kaye Karunambudhiye

Composer : Shri Vijayadasaru

By Smt.Nandini Sripad , Blore

ರಾಗ: ತೋಡಿ
ಆದಿತಾಳ

ಕಾಯೆ ಕರುಣಾಂಬುಧಿಯೇ ಇಂದಿರಾದೇವಿ || ಪ ||
ಕಾಯೆ ಕರುಣಾಂಬುಧಿಯೆ ಮಾಯೆ ನಾರಾಯಣ – |
ಜಾಯೆ ಸತತ ಜ್ಞಾನವೀಯೆ ಭಕ್ತರ ಪ್ರೀಯೇ || ಅ ಪ ||

ಕನ್ಯಾಮಣಿಯೆ ಕಾಮಿನಿ ಮಂಗಳವಾಣಿ |
ಸನ್ನುತೆ ಲೋಕಜನನಿ |
ನಿನ್ನ ಚರಣಯುಗ್ಮವನ್ನು ನಂಬಿದೆ ಸುಪ್ರ – |
ಸನ್ನೆ ಸರ್ವಜೀವ ಭಿನ್ನೆ ಭಾಗ್ಯಸಂಪನ್ನೆ ||
ಮನ್ನಿಸು ದಯದಿ ನೀ ಬಿನ್ನಪ ಲಾಲಿಸಿ |
ಚನ್ನೆ ಚಕ್ರ ಪಾಂಚಜನ್ಯ ವಿರಾಜಿತೆ || ೧ ||

ಅತಿದಯವಂತೆ ನೀನೆಂದು ಬೇಗದಿ ಬಂದು |
ತುತಿಸುವೆ ದೀನ ನಾನೆಂದು |
ಪತಿತರೊಳಿಡದಲೆ ಗತಿಗೆ ಸಮ್ಮತಳಾಗು – |
ತ್ಪತ್ತಿ ಸ್ಥಿತಿಲಯಕರ್ತೆ ಅತುಳ ಶೋಭನಮೂರ್ತೆ ||
ಪತಿಯಲಿ ಜನಿಸಿ ನೀ ಪತಿಗೆ ಸತಿಯಾದೆ |
ಪತಿಯ ಸಂಗಡ ಧ್ಯಾನಿತಳಾದ ಚರಿತೆ || ೨ ||

ಕುಂಕುಮಾಂಕಿತೆ ರಾಜಿತೆ ನಿಗಮಗೀತೆ |
ಪಂಕಜಾಸನ ಮಾತೆ |
ಲೆಂಕವತ್ಸಲೆ ಸರ್ವಾಲಂಕಾರಮಯೆ ರವಿ – |
ಸಂಕಾಶೆ ಬಹುಕಾಲ ಸಂಕಟವಿನಾಶೆ ||
ಮಂಕುಮತಿಹರ ವಿಜಯವಿಠ್ಠಲನ
ಸಂಕಲ್ಪಕೆ ಕಳಂಕ ಬಾರದಂತೆ || ೩ ||


rAga: tODi
AditALa

kAye karuNAMbudhiyE iMdirAdEvi || pa ||
kAye karuNAMbudhiye mAye nArAyaNa – |
jAye satata j~jAnavIye Baktara prIyE || a pa ||

kanyAmaNiye kAmini maMgaLavANi |
sannute lOkajanani |
ninna caraNayugmavannu naMbide supra – |
sanne sarvajIva Binne BAgyasaMpanne ||
mannisu dayadi nI binnapa lAlisi |
canne cakra pAMcajanya virAjite || 1 ||

atidayavaMte nIneMdu bEgadi baMdu |
tutisuve dIna nAneMdu |
patitaroLiDadale gatige sammataLAgu – |
tpatti sthitilayakarte atuLa SOBanamUrte ||
patiyali janisi nI patige satiyAde |
patiya saMgaDa dhyAnitaLAda carite || 2 ||

kuMkumAMkite rAjite nigamagIte |
paMkajAsana mAte |
leMkavatsale sarvAlaMkAramaye ravi – |
saMkASe bahukAla saMkaTavinASe ||
maMkumatihara vijayaviThThalana
saMkalpake kaLaMka bAradaMte || 3 ||

Leave a Reply

Your email address will not be published. Required fields are marked *

You might also like

error: Content is protected !!