Composer : Shri Gopala dasaru
ರಾಗ: ಆರಭಿ, ಆದಿತಾಳ
ಕಾಪಾಡೆಲೆ ಸಕಲಾಪದ್ಹಾರಿಣಿ ।
ಕೊಲ್ಹಾಪುರಗತ ಕಮಲೆ ॥ ಪ ॥
ಈ ಪರಿ ಹರಿಯ ದಯಾಪಾತ್ರಳೆ ಶುಭ
ನೂಪುರಾದಿ ಸುಕಲಾಪೆ ಶೋಭೆ ಭ್ರೂ-
ಚಾಪ ಚಲನದಿಂದ ಪವಮಾನನಿ –
ಗೆ ಪದದೇ ಭವತಾಪಗಳಳಿದೆ ॥ ಅ.ಪ ॥
ಇಂದೀವರವರಮಂದಿರನಂದನೆ ।
ಚಂದ್ರಜಯಿಪ ವದನೆ ।
ವೃಂದಾರಕ ಮುನಿವೃಂದ ವಂದಿತ ಪದಯುಗಳೆ
ಕುಂದಕುಟ್ಮಲರದನೆ ಮದನೆ ಮು।
ಕುಂದ ಹೃದಯಸದನೆ ॥
ಇಂದ್ರನೀಲನಿಭ ಸುಂದರತನು ಗುಣ –
ಸಾಂದ್ರ ಇಂದುಮುಖಿ ಮಂದರಧರ ಗೋ –
ವಿಂದ ಬಂಧುನುತೆ ವೃಂದಾವನಪತಿ
ನಂದನಂದನನಾನಂದಿನಿ ವಂದಿತೆ ॥ 1 ॥
ಕನ್ಯಾಮಣಿ ಜಗನ್ಮಾನ್ಯಾಮೃತ ಪಾ।
ವನ್ನಾಧರ ಬಿಂಬೆ ।
ಘನ್ನ ಕಲಶ ಕುಚವನ್ನು ಧರಿಪ ಕಟಿ
ಸಣ್ಣ ಘನನಿತಂಬೆ ಅಂಬೆ । ಚಿನ್ನಪುತ್ಥಳಿ ಗೊಂಬೆ ॥
ಅನ್ನವಸನ ಧನಧಾನ್ಯಕಾಗಿ ಪರ –
ರನ್ನು ಯಾಚಿಸಿ ಬಲು ಖಿನ್ನನಾಗುತಲಿ
ನಿನ್ನನು ಮರೆದೆನು ಎನ್ನವಗುಣಗ –
ಳನ್ನು ಎಣಿಸದಿರು ಮನ್ನಿಸು ಬಿನ್ನಪ ॥ 2 ॥
ಲೋಲಕುಂಡಲ ಕಪೋಲ ಶೋಭಿತ ।
ಕೀಲಾಲಜಾತಪಾಣಿ ।
ಕೇಳಿಲಿ ಯಮುನಾಕೂಲದಿ ಹರಿ ದು –
ಕೂಲಚೋರನ ರಾಣಿ ।ಜಾಣೆ ಸುಶೀಲೆ ಜಗತ್ರಾಣೆ ॥
ಕಾಳಕೂಟಸಮ ಕೀಳುವಿಷಯದಲಿ
ಬೀಳುವುದೆನ್ನ ಮನ ಕೀಳಿಸಿ ಶ್ರೀಗೋ –
ಪಾಲವಿಠಲ ನನುಗಾಲ ಸೇವಿಪಂತೆ
ಶೀಲವೀಯೆಯೆಂದು ಕೇಳುವೆ ಲಾಲಿಸೆ ॥ 3 ॥
kApADele sakalApad~hAriNi |
kolhApuragata kamale || pa ||
I pari hariya dayApAtraLe SuBa
nUpurAdi sukalApe SOBe BrU-
cApa calanadiMda pavamAnani –
ge padadE BavatApagaLaLide || a.pa ||
iMdIvaravaramaMdiranaMdane |
caMdrajayipa vadane |
vRuMdAraka munivRuMda vaMdita padayugaLe
kuMdakuTmalaradane madane mu|
kuMda hRudayasadane ||
iMdranIlaniBa suMdaratanu guNa –
sAMdra iMdumuKi maMdaradhara gO –
viMda baMdhunute vRuMdAvanapati
naMdanaMdananAnaMdini vaMdite || 1 ||
kanyAmaNi jaganmAnyAmRuta pA|
vannAdhara biMbe |
Ganna kalaSa kucavannu dharipa kaTi
saNNa GananitaMbe aMbe |
cinnaputthaLi goMbe ||
annavasana dhanadhAnyakAgi para –
rannu yAcisi balu KinnanAgutali
ninnanu maredenu ennavaguNaga –
Lannu eNisadiru mannisu binnapa || 2 ||
lOlakuMDala kapOla SOBita |
kIlAlajAtapANi |
kELili yamunAkUladi hari du –
kUlacOrana rANi |jANe suSIle jagatrANe ||
kALakUTasama kILuviShayadali
bILuvudenna mana kILisi SrIgO –
pAlaviThala nanugAla sEvipaMte
SIlavIyeyeMdu kELuve lAlise || 3 ||
Leave a Reply