Composer : Shri Pranesha dasaru
ಕಾಯೆ ನಿನ್ನ ಪದ ತೋಯಜಕೆರಗುವೆ |
ಮಾಯದೇವಿ ಹರಿ ಕಾಯ ನಿವಾಸೇ | ಕಾಯೇ | ಪ |
ಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನ ಸತಿ |
ಕರ್ದಮಜಾಲಯ | ಭದ್ರ ಶರೀರೆ ||೧||
ಇಂಗಡಲಾತ್ಮಜೆ | ಅಂಗನಾಕುಲ ಮಣಿ |
ರಂಗನ ಪದಕಂಜ | ಭೃಂಗೆ ಕರುಣದಿ ||೨||
ಪ್ರಾಣೇಶ ವಿಠಲನ | ಮಾನಿನೀ ಯೆನ್ನಯ |
ಹೀನತೆಯೆಣಿಸದೆ | ಪೋಣಿಸಿ ಮತಿಯ ||೩||
kAye ninna pada tOyajakeraguve |
mAyadEvi hari kAya nivAsE | kAyE | pa |
buddhiya prErise | pradyumnana sati |
kardamajAlaya | Badra SarIre ||1||
iMgaDalAtmaje | aMganAkula maNi |
raMgana padakaMja | BRuMge karuNadi ||2||
prANESa viThalana | mAninI yennaya |
hInateyeNisade | pONisi matiya ||3||
Leave a Reply