Indira Palisu Enna

Composer : Shri Vyasa vittala [Kalluru Subbanacharya]

By Smt.Nandini Sripad , Blore

ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರ ಕೃತಿ
(ವ್ಯಾಸವಿಟ್ಠಲ ಅಂಕಿತ)

ರಾಗ ಶಂಕರಾಭರಣ ರೂಪಕತಾಳ

ಇಂದಿರಾ ಪಾಲಿಸು ಎನ್ನ ಇಂದಿರಾ || ಪ ||
ಇಂದಿರಾದೇವಿಯೆ ನಿನ್ನ | ಪಾದ
ಪೊಂದಿದೆ ಸಲಹಬೇಕೆನ್ನ || ಆಹಾ ||
ಕಂದರ್ಪ ಇಂದ್ರ ಫಣೀಂದ್ರ ಗರುಡ ಕಂದು
ಕಂಧರ ಬ್ರಹ್ಮಾದಿವಂದ್ಯಳೆ ಪಾಲಿಸು || ಅ.ಪ ||

ಶ್ರೀ ಮಾಯೆ ಜಯ ಕೃತಿ ಶಾಂತಿ | ದುರ್ಗೆ
ಭೂಮಿ ಶ್ರೀದೇವಿ ಜಯಂತಿ | ಲಕ್ಷ್ಮೀ
ರಮೆ ದಕ್ಷಿಣೆ ಗುಣವಂತಿ | ಸತ್ಯ
ಭಾಮೆ ರುಗ್ಮಿಣಿ ಮಹಾಕಾಂತಿ || ಆಹಾ ||
ಈ ಮಹಾನಂತ ರೂಪ ನಾಮಗಳುಳ್ಳ
ಕೋಮಲಗಾತ್ರಿಯೆ ಕಾಮಜನನಿ ಕಾಯೆ || ೧ ||

ಶ್ರೀಭಾಗ ಮಹಾ ಪ್ರಳಯದಲ್ಲಿ | ಪದ್ಮ
ನಾಭಾಗೆ ಬಹು ಭಕ್ತಿಯಲ್ಲಿ | ದಿವ್ಯ
ಆಭರಣಗಳಾಕಾರದಲ್ಲಿ | ಮಿಕ್ಕ
ವೈಭವನೇಕ ರೂಪಾದಲ್ಲಿ || ಆಹಾ ||
ಸ್ವಾಭಿಮಾನದಿ ಬಹು ಶೋಭನ ಪೂಜೆಯ
ಲಾಭಗಳೈದಿದ ಶೋಭನವಂತಳೆ || ೨ ||

ದೇಶಕಾಲಾದಿಗಳಲ್ಲಿ | ಜೀವ
ರಾಶಿ ವೇದಾಕ್ಷರದಲ್ಲಿ | ಇದ್ದು
ವಾಸುದೇವನ ಬಳಿಯಲ್ಲಿ | ಸರಿ
ಸೂಸಿ ವ್ಯಾಪ್ತಿ ಸಮದಲ್ಲಿ || ಆಹಾ ||
ಲೇಸಾಗಿ ಒಪ್ಪುತ್ತ ಈಶ ಕೋಟಿಯೊಳು
ವಾಸಾಳೆ ಎನ್ನಭಿಲಾಷೆ ಸಲ್ಲಿಸಬೇಕು || ೩ ||

ಆನಾದಿಯಿಂದಲಿ ಬಂದ | ಮೋಹಾ
ಜ್ಞಾನ ಕಾಮ ಕರ್ಮದಿಂದ | ಹೇತು
ನಾನಾ ಜನ್ಮದಿ ಬಹು ನೊಂದ | ದ್ದೆಲ್ಲ
ಏನ ಪೇಳಲಿ ಭವಬಂಧಾ || ಆಹಾ ||
ನೀನೆ ಕಳೆದು ದಿವ್ಯ ಜ್ಞಾನ ಭಕುತಿಯಿತ್ತು
ಪ್ರಾಣಪತಿಯ ಪಾದವನ್ನು ತೋರಿಸಬೇಕು || ೪ ||

ನಿತ್ಯ ಭಾಗ್ಯವು ನಿನಗೊಂದೆ | ಅಲ್ಲ
ರತ್ನಾಕರನು ನಿನ್ನ ತಂದೆ | ತಾಯಿ
ರತ್ನಗರ್ಭಳು ಕೇಳು ಮುಂದೆ | ಪತಿ
ಗತ್ಯಂತ ಪ್ರಿಯಳಾದೆ ಅಂದೆ || ಆಹಾ ||
ಸತ್ಯಬೋಧರು ಮಾಳ್ಪ ಅತ್ಯಂತ ಪೂಜೆಯಿಂ
ಯುಕ್ತ ಶಿರಿಯೆ ನಿನಗೆತ್ತ ಕತ್ತಲು ಕಾಣೆ || ೫ ||

ಲೋಕಜನನಿಯು ಎಂದು ನಿನ್ನ | ಕೀರ್ತಿ
ಸಾಕಲ್ಯವಾಗಿದೆ ಘನ್ನ | ಎನ್ನ
ಸಾಕಲಾರದೆ ಬಿಡಲಿನ್ನ | ಮುಂದೆ
ಯಾಕೆ ಭಜಿಸುವುದು ನಿನ್ನ || ಆಹಾ ||
ಸಾಕಾರವಾಗಿನ್ನು ಬೇಕಾದ ವರಗಳ
ನೀ ಕರುಣಿಸಿ ಎನ್ನ ಜೋಕೆ ಮಾಡಲಿಬೇಕು || ೬ ||

ಆವ ಜನ್ಮದ ಪುಣ್ಯ ಫಲದಿ | ನಿನ್ನ
ಸೇವೆ ದೊರಕಿತೊ ಈ ಕ್ಷಣದಿ | ಬಹು
ಪಾವನನಾದೆ ಈ ದಿನದಿ | ಎನ
ಗೀವ ಭವ್ಯ ಕೇಳು ಮನದಿ || ಆಹಾ ||
ಶ್ರೀವ್ಯಾಸವಿಠಲನ್ನ ಸೇವಿಪ ಯತಿಗಳ ಸ –
ಹಾವಾಸವನೆ ಇತ್ತು ಭಾವಶುದ್ಧನ ಮಾಡು || ೭ ||


SrI kallUru subbaNNAcAryara kRuti
(vyAsaviTThala aMkita)

rAga SaMkarABaraNa rUpakatALa

iMdirA pAlisu enna iMdirA || pa ||
iMdirAdEviye ninna | pAda
poMdide salahabEkenna || AhA ||
kaMdarpa iMdra PaNIMdra garuDa kaMdu
kaMdhara brahmAdivaMdyaLe pAlisu || a.pa ||

SrI mAye jaya kRuti SAMti | durge
BUmi SrIdEvi jayaMti | lakShmI
rame dakShiNe guNavaMti | satya
BAme rugmiNi mahAkAMti || AhA ||
I mahAnaMta rUpa nAmagaLuLLa
kOmalagAtriye kAmajanani kAye || 1 ||

SrIBAga mahA praLayadalli | padma
nABAge bahu Baktiyalli | divya
ABaraNagaLAkAradalli | mikka
vaiBavanEka rUpAdalli || AhA ||
svABimAnadi bahu SOBana pUjeya
lABagaLaidida SOBanavaMtaLe || 2 ||

dESakAlAdigaLalli | jIva
rASi vEdAkSharadalli | iddu
vAsudEvana baLiyalli | sari
sUsi vyApti samadalli || AhA ||
lEsAgi opputta ISa kOTiyoLu
vAsALe ennaBilAShe sallisabEku || 3 ||

AnAdiyiMdali baMda | mOhA
j~jAna kAma karmadiMda | hEtu
nAnA janmadi bahu noMda | ddella
Ena pELali BavabaMdhA || AhA ||
nIne kaLedu divya j~jAna Bakutiyittu
prANapatiya pAdavannu tOrisabEku || 4 ||

nitya BAgyavu ninagoMde | alla
ratnAkaranu ninna taMde | tAyi
ratnagarBaLu kELu muMde | pati
gatyaMta priyaLAde aMde || AhA ||
satyabOdharu mALpa atyaMta pUjeyiM
yukta Siriye ninagetta kattalu kANe || 5 ||

lOkajananiyu eMdu ninna | kIrti
sAkalyavAgide Ganna | enna
sAkalArade biDalinna | muMde
yAke Bajisuvudu ninna || AhA ||
sAkAravAginnu bEkAda varagaLa
nI karuNisi enna jOke mADalibEku || 6 ||

Ava janmada puNya Paladi | ninna
sEve dorakito I kShaNadi | bahu
pAvananAde I dinadi | ena
gIva Bavya kELu manadi || AhA ||
SrIvyAsaviThalanna sEvipa yatigaLa sa –
hAvAsavane ittu BAvaSuddhana mADu || 7 ||

Leave a Reply

Your email address will not be published. Required fields are marked *

You might also like

error: Content is protected !!