Composer : Shri Gurujagannatha dasaru
ಬಾರವ್ವ ಮಹಾ ಭಾಗ್ಯದಭಿಮಾನಿ
ಶ್ರೀಹರಿ ನಿಜ ರಾಣೀ [ಪ]
ಸಾರಿದ ನಿನ್ನ ಪದ ನೀರಜ ಯುಗ-ಮನೋ
ವಾರಿಜದಲಿ ನೀ ತೋರುತ ಲಕುಮೀ [ಅ.ಪ]
ಇಷ್ಟಾರ್ಥವ ಸಲಿಸಿ ಎನ್ನನು ಪೊರೆಯೇ
ಕೊಲ್ಹಾಪುರ ಸಿರಿಯೇ
ಅಷ್ಟ ದಾರಿದ್ರ ಕಳೆದು ನೀ ತರಿಯೇ
ಈಕ್ಷಣ ಸುಖ ಸುರಿಯೇ
ಅಷ್ಟ ಪಾದೋಧರ ಅಷ್ಟ ಮೂರ್ತಿ ನಿನ್ನ
ದೃಷ್ಟಿಯಿಂದ ಮಹ ಶ್ರೇಷ್ಟನಾಗಿಹನೇ |೧|
ಕ್ಷೀರ ವಾರಿಧಿಯೊಳು ಸಂಜಾತೆ
ಮಾರನ್ನ ಮಾತೆ
ಅಪಾರ ಮಹಿಮಳೆ ಸುರ ಸನ್ನುತೆ
ಜಗದೊಳಗೆ ಖ್ಯಾತೆ
ವಾರ ವಾರಕೆ ದುರಿತಾರಿ ನಿನ್ನಯ ಪೂಜೆ
ಚಾರು ಮನದಿ ಮಾಳ್ಪೆ ಧೀರೆ ಉದ್ಧಾರೆ |೨|
ನಗೆ ಮೊಖ ಚೆನ್ನ ಸುಪ್ರಸನ್ನೆ
ಸುರ ನಿಕರ ರನ್ನೆ
ಮಗುವಿನ ಮಾತೆಂದು ನಗುತಲಿ ಇನ್ನೆ
ಬಾ ಬರುವದು ಘನ್ನೆ
ನಗಹರ ಸುರಪನ ಮಗನ ಸಖ-ಗುರು
ಜಗನ್ನಾಥ ವಿಠಲ ಸಂಮೊಗವಾಗಿ ಬೇಗ ನೀ |೩|
bAravva mahA bhAgyadabhimAni
shrIhari nija rANI [pa]
sArida ninna pada nIraja yuga-manO
vArijadali nI tOruta lakumI [a.pa]
iShTArthava salisi ennanu poreyE
kolhApura siriyE
aShTa dAridra kaLedu nI tariyE
IkShaNa sukha suriyE
aShTa pAdOdhara aShTa mUrti ninna
dRuShTiyiMda maha shrEShTanAgihanE |1|
kShIra vaaridhiyoLu saMjAte
mAranna mAte
apAra mahimaLe sura sannute
jagadoLage KyAte
vAra vArake duritAri ninnaya pUje
chAru manadi mALpe dhIre uddhAre |2|
nage mokha chenna suprasanne
sura nikara ranne
maguvina mAteMdu nagutali inne
bA baruvadu ghanne
nagahara surapana magana sakha-guru
jagannAtha viThala saMmogavAgi bEga nI |3|
Leave a Reply