Composer : Shri Anantadreesharu
ಬಾರೆ ಭಾಗ್ಯದ ನಿಧಿಯೇ ಕರವೀರ
ನಿವಾಸಿನಿ ಸಿರಿಯೆ [ಪ]
ಬಾರೆ ಬಾರೆ ಕರವೀರ ನಿವಾಸಿನಿ
ಬಾರಿಬಾರಿಗು ಶುಭ
ತೋರೆ ನಮ್ಮನಿಗೆ [ಅ.ಪ]
ನಿಗಮ ವೇದ್ಯಳೆ ನೀನು
ನಿನ್ನ ಪೊಗಳಲಾಪೆನು ನಾನು
ಮಗನಪರಾಧವ ತೆಗೆದೆಣಿಸದೆ ನೀ
ಲಗು ಬಗೆಯಿಂದಲಿ ಪನ್ನಗವೇಣಿ [೧]
ಲೋಕಮಾತೆಯು ನೀನು ನಿನ್ನ
ತೋಕನಲ್ಲವೆ ನಾನು
ಆಕಳು ಕರುವಿನ ಸ್ವೀಕರಿಸುವಪರಿ
ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ [೨]
ಕಡೆಗೆ ನಮ್ಮನೆ ವಾಸ
ಎನ್ನೊಡೆಯ ’ಅನಂತಾದ್ರೀಶ’
ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು
ರೂಢಿಗುಚಿತವಿದು ನಡೆ ನಮ್ಮನಿಗೆ [೩]
bAre BAgyada nidhiyE karavIra
nivAsini siriye [pa]
bAre bAre karavIra nivAsini
bAribArigu SuBa
tOre nammanige [a.pa]
nigama vEdyaLe neenu
ninna pogaLalApenu naanu
maganaparAdhava tegedeNisade nI
lagu bageyiMdali pannagavENi [1]
lOkamAteyu nInu ninna
tOkanallave nAnu
AkaLu karuvina svIkarisuvapari
nI karuNadi kAlhAku namma manage [2]
kaDege nammane vAsa
ennoDeya ‘anaMtAdrISa’
oDeyaniddallige maDadiyu bAhodu
rUDhigucitavidu naDe nammanige [3]
Leave a Reply