Kaada beladingalu

Composer : Shri Shripadarajaru

By Smt.Shubhalakshmi Rao

ನೀ ಕರುಣಿ ಎಂದು ನಿನ್ನ ನಾ ಮೊರೆ ಹೊಕ್ಕೆ
ನೀಕರಿಸದೆ ಎನ್ನ ಶ್ರೀಕಾಂತ ಕಾಯಯ್ಯ
ನಿನ್ನವನೆಂಬೆ ನಾನು ಮತ್ತಂಯವ ನರಿಯೆನೊ
ನಿನ್ನವನೆಂಬೆ ನಾನು
ಕಂದರ್ಪನೆಂದೆಂದು ಕಾಡದಂತೆ ಮಾಡೊ
ವೃಂದಾರಕಾಧೀಶ ರಂಗವಿಠಲ ||

ಕಾಡ ಬೆಳದಿಂಗಳು ಈ ಸಂಸಾರ
ಕತ್ತಲೆ ಬೆಳದಿಂಗಳು |ಪ|

ಸತ್ಯಕ್ಕೆ ಧರ್ಮನು ಲೆತ್ತವನಾಡಲು
ಅರ್ಧ ಭಾಂಡಾರವೆಲ್ಲವ ಸೋತು
ಮತ್ತೆ ವಿರಾಟರಾಯನ ಮನೆಯಲ್ಲಿ
ತೊತ್ತಾದಳು ದ್ರೌಪದಿ ಒಂದು ವರುಷ |೧|

ಪುಂಡರೀಕಾಕ್ಷ ಪುರುಷೋತ್ತಮ ಹರಿಯು
ಬಂಡಿಬೋವನಾದ ಪಾರ್ಥನಿಗೆ ಭೂ
ಮಂಡಲವನಾಳುವ ಹರಿಶ್ಚಂದ್ರರಾಯನು
ಕೊಂಡವ ಕಾಯಿದನು ಹೊಲೆಯನಾಳಾಗಿ |೨|

ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಂದು ಬಾಗಿಲ ಕಾಯ್ವರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಗೋಣ ಮೇಲೆತ್ತುವರು |೩|

ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
ಬೆಂಬಲದಲಿ ನಲಿನಲಿವುತಿಹರು
ಬೆಂಬಲತನ ತಪ್ಪಿ ಬಡತನ ಬಂದರೆ
ಇಂಬು ನಿನಗಿಲ್ಲ ನಡೆಯೆಂಬರಯ್ಯ |೪|

ಏರುವ ದಂಡಿಗೆ ನೂರಾಳು ಮಂದಿಯು
ಮೂರುದಿನದ ಭಾಗ್ಯ ಝಣಝಣವು
ನೂರಾರು ಸಾವಿರ ದಂಡವ ತೆತ್ತರೆ
ರಂಗವಿಠ್ಠಲನನೆ ಸರಿಯೆಂಬೊರಯ್ಯ |೫|


nee karuNi eMdu ninna naa more hokke
neekarisade enna shrIkAMta kAyayya
ninnavaneMbe nAnu mattaMyava nariyeno
ninnavaneMbe nAnu
kaMdarpaneMdeMdu kADadaMte mADo
vRuMdArakAdhIsha raMgaviThala ||

kADa beLadiMgaLu I saMsAra
kattale beLadiMgaLu |pa|

satyakke dharmanu lettavanADalu
ardha BAMDAravellava sOtu
matte virATarAyana maneyalli
tottAdaLu draupadi oMdu varuSha |1|

puMDarIkAkSha puruShOttama hariyu
baMDibOvanAda pArthanige BU –
maMDalavanALuva hariScaMdrarAyanu
koMDava kAyidanu holeyanALAgi |2|

uMTAda kAlakke neMTaru iShTaru
baMTarAgi baMdu bAgila kAyvaru
uMTAdatana tappi baDatana baMdare
oMTeyaMte gONa mElettuvaru |3|

uMbAga uDuvAga koMbAga koDuvAga
beMbaladali nalinalivutiharu
beMbalatana tappi baDatana baMdare
iMbu ninagilla naDeyeMbarayya |4|

Eruva daMDige nUrALu maMdiyu
mUrudinada BAgya JaNaJaNavu
nUrAru sAvira daMDava tettare
raMgaviThThalanane sariyeMborayya |5|

Leave a Reply

Your email address will not be published. Required fields are marked *

You might also like

error: Content is protected !!