Composer : Shri Shripadarajaru
ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ, ಕಾಯೊ ಗೋವಿಂದ ||ಪ||
ಹೆಸರುಳ್ಳ ನದಿಗಳ ಒಳಗೊಂಬ ಸಮುದ್ರನು
ಬಿಸುಡುವನೆ ಕಾಲು ಹೊಳೆಗಳ ಗೊವಿಂದ ||೧||
ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆ
ಬಂಧನ ಬಿಡಿಸೆನ್ನ ತಂದೆ ಗೋವಿಂದ ||೨||
ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||೩||
ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ
ನಿನ್ನ ಓಲೈಸಲ್ಯಾಕೆ ಗೋವಿಂದ ||೪||
ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ
ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ||೫||
ಅರಸು ಮುಟ್ಟಲು ದಾಸಿ ರಂಭೆಯಾದಳು ದೇವ
ಪರುಷ ಮುಟ್ಟಲು ಲೋಹ ಸ್ವರ್ಣ ಗೋವಿಂದ ||೬||
ಮಾನಾಭಿಮಾನದೊಡೆಯ ಶ್ರೀರಂಗವಿಠ್ಠಲ
ಜ್ಞಾನಿಗಳರಸನೆ ಕಾಯೋ ಗೋವಿಂದ ||೭||
duritagaja paMcAnana nara-
hariye dEvara dEva, kAyo gOviMda ||pa||
hesaruLLa nadigaLa oLagoMba samudranu
bisuDuvane kAlu hoLegaLa goviMda ||1||
oMdu molake Aru huli baMdu kavidive
baMdhana biDisenna taMde gOviMda ||2||
hetta makkaLu huccarAdare tAytaMde
ettade nelake bisuDuvare gOviMda ||3||
munna mADida karma benna biDadiddare
ninna OlaisalyAke gOviMda ||4||
Apattu tApatraya benna biDadiddare
SrIpati SaraNennalyAke gOviMda ||5||
arasu muTTalu dAsi raMBeyAdaLu dEva
paruSha muTTalu lOha svarNa gOviMda ||6||
mAnABimAnadoDeya SrIraMgaviThThala
j~jAnigaLarasane kAyO gOviMda ||7||
Leave a Reply