Composer : Shri Shripadarajaru
ದೇವಿ ಬಂದಳೇ ಶ್ರೀದೇವಿ ಬಂದಳೇ
ಚೌರಿ ರಾಗುಟಿ ಹಾಕಿದ ಚೆಲುವೆ ಬಂದಳೇ [ಪ]
ಬುಗುಡಿ ಮೂಗುತಿ ಇಟ್ಟ ಸುಗುಣೆ ಹರಿಸತೀ
ವಾರಿಜಾ ಮುಖಿ ರಥವನೇರಿ ಬಂದಳೆ [೧]
ಸ್ನಾನ ಮಾಡ್ರವ್ವಾ ದೇವಿ ಪೂಜೆ ಮಾಡ್ರವ್ವಾ
ದೇವಿ ಮುಂದೆ ನಿಂತುಕೊಂಡು ವರವ ಬೇಡ್ರವ್ವಾ [೨]
ಸೀರೆ ಉಟ್ಟಳೆ ಒಳ್ಳೆ ರವಿಕೆ ತೊಟ್ಟಳೆ
ಮಗುವನೆತ್ತಿಕೊಂಡು ತಾ ನಗುತ ಬಂದಳೇ [೩]
ಕಡಗ ಕಂಕಣ ಹೊಳೆವ ಗೆಜ್ಜೆ ಪೈಝಣ
ಘಲು ಘಲು ಘಲು ಎಂದು ಕುಣಿದು ಬಂದಳೇ [೪]
ರಂಗವಿಠಲನಾ ಅರಸಿ ಶೃಂಗಾರದಿ
ಬಂದು ನೆಲೆಸಿ ಭಕ್ತರ ಹೃದಯ ಕಮಲದಿ [೫]
dEvi baMdaLE SrIdEvi baMdaLE
cauri rAguTi hAkida celuve baMdaLE [pa]
buguDi mUguti iTTa suguNe harisatI
vArijA muKi rathavanEri baMdaLe [1]
snAna mADravvA dEvi pUje mADravvA
dEvi muMde niMtukoMDu varava bEDravvA [2]
sIre uTTaLe oLLe ravike toTTaLe
maguvanettikoMDu tA naguta baMdaLE [3]
kaDaga kaMkaNa hoLeva gejje paiJaNa
Galu Galu Galu eMdu kuNidu baMdaLE [4]
raMgaviThalanA arasi SRuMgAradi
baMdu nelesi Baktara hRudaya kamaladi [5]
Leave a Reply