Composer : Shri Vadirajaru
ಬಾರಯ್ಯ ಯದುಕುಲತಿಲಕ
ತೋರಯ್ಯ ನಿನ್ನ ಮುದ್ದು ಮುಖವ |
ಓರಂತೆ ಮುದ್ದಿಸಿ ಯಶೋದೆ
ಕುಮಾರನೆ ಬಾರೆಂದಳೈ ||ಪ||
ಅಂದವಾದ ನಿನ್ನ ಮುದ್ದು ಮುಖದ
ಚೆಂದವನ್ನು ತಾ ನೋಡಿ |
ಕಂದಿಕುಂದಿ ಇಂದಿರೆಯು ಮರುಳಾಗಿ
ಕಂದ ನಿನ್ನ ಪೊಂದೇನೆಂದಳೈ ||೧||
ಕೃಷ್ಣ ನಿನ್ನ ಮಕ್ಕಳಾಟಿಕೆ
ಶ್ರೇಷ್ಠರಿಗೆ ಮೋಹನವಾಯಿತು |
ದುಷ್ಟ ಮತ ಮಾತಂಗಕ್ಕೆ
ಅಟ್ಟುವೊ ಸಿಂಹದ ಮರಿಯೆ ||೨||
ಇಂಥ ಹಯವದನ ನಾ
ಇಂಥ ದೇವರ ನಾ ಕಾಣೆ |
ಪಂಥವೇನೊ ಎನ್ನ ಕೂಡೆ ದಿನಮಣಿ
ತಿಂತಿಣಿಯೆ ಬಾರೆಂದಳೈ ||೩||
bArayya yadukulatilaka
tOrayya ninna muddu muKava |
OraMte muddisi yaSOde
kumArane bAreMdaLai ||pa||
aMdavAda ninna muddu muKada
ceMdavannu tA nODi |
kaMdikuMdi iMdireyu maruLAgi
kaMda ninna poMdEneMdaLai ||1||
kRuShNa ninna makkaLATike
SrEShTharige mOhanavAyitu |
duShTa mata mAtaMgakke
aTTuvo siMhada mariye ||2||
iMtha hayavadana naa
iMtha dEvara nA kANe |
paMthavEno enna kUDe dinamaNi
tiMtiNiye bAreMdaLai ||3||
Leave a Reply