Composer : Shri Amba bai
ಬಂಧನದ ಪರಿ ಏನೋ ಬಾಲ ಹನುಮ [ಪ]
ಬಂಧಿಸಿದರಾರಿಲ್ಲಿ ನಿನ್ನ ಹನುಮ [ಅ.ಪ]
ಒಂದು ಸಲ ನೋಡುವೆನೆ ಬ್ರಹ್ಮಾಸ್ತ್ರವಲ್ಲವಿದು
ಒಂದು ಸಲ ನೋಡುವೆನೆ ಅಜಗರವಿದಲ್ಲ
ಒಂದು ಸಲ ನೋಡುವೆನೆ ಕಳ್ಳ ಗುಂಪಲ್ಲವಿದು
ಒಂದೆರಡು ಕೋಣವೆರಡರ ಮಧ್ಯೆ ಇರುವ [೧]
ಕ್ಷಣಕೆ ಪರಿಹರವಾಯ್ತು ಹಿಂದೆ ಆ ಬಂಧಗಳು
ಕ್ಷಣಕ್ಷಣಕು ಇದ್ದಂತೆ ಇರುವುದೀ ತೊಡಕು
ಗುಣದಂತೆ ಆವರಣ ವರ್ತುಳಾಕಾರದಲಿ
ತೆನೆಗಳಲಿ ಕೋತಿಗಳ ಕಾವಲಿನ ಕಟ್ಟು [೨]
ಬೀಸಿದೀ ಬಲೆ ತೆಗೆಯೆ ಶ್ರೀಶನಿಗು ಅಳವಲ್ಲ
ವಾಸುದೇವನೆ ಬಲ್ಲ ಈ ಮರ್ಮವ
ದಾಸಜನ ಪ್ರಿಯ ಶ್ರೀಗೋಪಾಲಕೃಷ್ಣವಿಠಲ
ವ್ಯಾಸರಿಂದಲಿ ನಿನಗೆ ಮೋಸಗೈಸಿದನೋ [೩]
baMdhanada pari EnO bAla hanuma [pa]
baMdhisidarArilli ninna hanuma [a.pa]
oMdu sala nODuvene brahmAstravallavidu
oMdu sala nODuvene ajagaravidalla
oMdu sala nODuvene kaLLa guMpallavidu
oMderaDu kONaveraDara madhye iruva [1]
kShaNake pariharavAytu hiMde A baMdhagaLu
kShaNakShaNaku iddaMte iruvudI toDaku
guNadaMte AvaraNa vartuLAkAradali
tenegaLali kOtigaLa kAvalina kaTTu [2]
bIsidI bale tegeye SrISanigu aLavalla
vAsudEvane balla I marmava
dAsajana priya SrIgOpAlakRuShNaviThala
vyAsariMdali ninage mOsagaisidanO [3]
Leave a Reply