Devi Indire

Composer : Shri Vishwendra Tirtharu

By Smt.Shubhalakshmi Rao

ದೇವಿ ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪ
ಪ್ರೇಮವ ಬಣ್ಣಿಸಲಸದಳ ಕಂಡ್ಯ [ಪ]

ಜಕ್ಕ ಜವ್ವನ ಪೋಗ ಬಾರದೆಂದೆನುತಲಿ
ಮಕ್ಕಳ ನಿನ್ನೊಳು ಜನಿಸನು ಕಂಡ್ಯ
ಪೊಕ್ಕಳೊಳಗೆ ತಾನೆ ಮಕ್ಕಳ ಪುಟ್ಟಿಸಿದ
ಅಕ್ಕರೆಯನು ಶ್ರೀದೇವಿ ನೀ ಕಂಡ್ಯ [೧]

ಉರದೊಳು ತೊಡೆಯೊಳು ಕೊರಳೊಳಾಭರಣದೊಳ್
ಕರಗಳಿಂದಲಿ ಪಾಶ್ರ್ವದೊಳಗಾಲಿಂಗಿಸಿದಾ
ನೀರೊಳಕ್ರೂರಗೆ ಒಲಿಯುವಾಗಲು, ಮಹಾ
ಪ್ರಳಯದಿ ನಿನ್ನನು ಬಿಡನು [೨]

ರಾಜಾಧೀರಾಜರು ಬಹುದಾರರೆಂಬರು
ರಾಜೀವಾಕ್ಷನಿಗೆ ನೀನೊಬ್ಬಳೆ ಕಂಡ್ಯ
ರಾಜೇಶ ಹಯಮುಖನಂಥ ಪ್ರೇಮಿಗಳುಂಟೆ
ರಾಜೇಶ ಶ್ರೀರಾಮನರಸಿಯೊಬ್ಬಳೆ ಕಂಡ್ಯ [೩]


dEvi iMdire ninnoL dEva SrIharigippa
prEmava baNNisalasadaLa kaMDya [pa]

jakka javvana pOga bAradeMdenutali
makkaLa ninnoLu janisanu kaMDya
pokkaLoLage tAne makkaLa puTTisida
akkareyanu SrIdEvi nI kaMDya [1]

uradoLu toDeyoLu koraLoLABaraNadoL
karagaLiMdali pASrvadoLagAliMgisidA
nIroLakrUrage oliyuvAgalu, mahA
praLayadi ninnanu biDanu [2]

rAjAdhIrAjaru bahudArareMbaru
rAjIvAkShanige nInobbaLe kaMDya
rAjESa hayamuKanaMtha prEmigaLuMTe
rAjESa SrIrAmanarasiyobbaLe kaMDya [3]

Leave a Reply

Your email address will not be published. Required fields are marked *

You might also like

error: Content is protected !!