ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತ
ಪ್ರಾರ್ಥನಾ ಸುಳಾದಿ
ರಾಗ: ಪೂರ್ವಿಕಲ್ಯಾಣಿ
ಧ್ರುವತಾಳ
ಎನ್ನಯ ನಾಯಕೀಯ ಸ್ವಾಮಿಯ ಕಂಡಂತೆ
ನಿನ್ನ ನೋಡಲಾಯಿತೊ ಪ್ರಾಣಪ್ರಿಯ ದೂತನೆ
ಚನ್ನಾಗಿ ನೋಡೊ ಇವಳ ಪರಿಯನ್ನು
ಬಿನ್ನಪ ಮಾಡುವೆ ಅಪರಾಧಗಳ
ನಿನ್ನಂತ ಘಟಕರ ಇನ್ನೊಬ್ಬರ ಕಾಣೆ
ಮನವಿಟ್ಟು ನೀನೆವೆ ವಾಸುದೇವವಿಟ್ಠಲಂಗೆ
ಬಿನ್ನೈಸಿ ಕೂಡಿಸೊ ಘನ್ನ ದಯಾನಿಧೆ || ೧ ||
ಮಟ್ಟತಾಳ
ಪತಿಯ ಬಳಿಯಲಿದ್ದು ಪತಿಯ ಮನವರಿಯಳೊ
ಅತಿಶಯ ಸುಖವಿತ್ತು ವಿಭವ ತೋರಿಸಲಾಗ
ಮತಿಯಲಿ ಸುಖ ರತಿಯಲಿ ಮನ ಉಬ್ಬಿ ಸ್ಮೃತಿಯನು ಕಳಕೊಂ –
ಡತುಳಜ್ಞವ ಮೀರಿ ಹಿತ ಗೆಳತಿಯ ಮುಂದೆ
ರತಿಯ ಸುಖವ ಪೇಳಿ ಪತಿ ವಾಸುದೇವವಿಟ್ಠಲ
ಪತಿತಳು ಇವಳೆಂದು ಅತಿ ವ್ಯವಹಿತನಾದಾ || ೨ ||
ತ್ರಿವಿಡಿತಾಳ
ಸತಿಯರೊಳಗಿವಳು ಅತಿಮುಗ್ಧ ವಧುವಳು
ಗತ ಅಗತವೊಂದೂ ಮತಿಯಲ್ಲಿ ಅರಿಯಳೊ
ಖತಿಯನ್ನು ತನಗೆ ತಾ ಕೃತಿಸಿ ಕಂಡವರಲಿ
ಅತಿ ಬಾಯಿ ಬಿಡುವಳೊ ಗತಿಯೇನು ಇದಕಿನ್ನು
ರತಿಪತಿಪಿತ ವಾಸುದೇವವಿಟ್ಠಲರೇಯ
ಹಿತವಾಗುವಂತೆ ಉಪಕೃತಿ ಮಾಡೊ ಹಿತನೆ || ೩ ||
ಅಟ್ಟತಾಳ
ಧವಬಿಟ್ಟ ವಿರಹದ ಭವಣಿಯಿಂದ ಅವಳಿಗೆ
ನವಗಂಧಗಳೆ ಬಂಧ ಸುವಸ್ತ್ರವೇ ಶಸ್ತ್ರ
ಭವನವೆಂಬೊಂದೆ ಬಲು ಕುವನವಾಗಿವಳಿಗೆ
ನವಚೂತ ಪಲ್ಲವ ಸವಿಧಾವಿ ಪಲ್ಲವ
ವಿವಿಧ ತಾಪಗಳನುಭವಿಸುವ ಇವಳನ್ನು
ಭುವನೇಶ ಶ್ರೀವಾಸುದೇವವಿಟ್ಠಲ ಪಾದ
ಸುವಿಮಲತರ ನಖ ಶಶಿ ಛವಿಯಿಂದ ಪಾಲಿಸೊ
ಪ್ರವಣ ನಾ ಮರಿಯೆನೊ ಭುವನದೊಳಗೆ ನಿನ್ನ || ೪ ||
ಆದಿತಾಳ
ಅನಲಿ ಬಹುದುವೊಂದು ಅನಲಕ್ಕೆ ಬಾರದು
ಇನಿತಪರಾಧದಿ ದಣಿವದೆ ಸಾಕು ಕನಿಸಿಲಿ ಬೇಡೆಂದು
ಮುನಿಸಿನಲಿ ಹೇಳೆಂಬನು ಬ್ಯಾರಿದ್ದಾನೆ
ಅನುದಿನ ನೀ ಬಲ್ಲಿ
ವನಜಾಕ್ಷಿಯ ತನುಮನ ಅಸು ಉಳಿಸೆಂದು
ವಿನಯದಿ ವಾಸುದೇವವಿಟ್ಠಲಗೆ ಪೇಳೊ || ೫ ||
ಜತೆ
ಒಲಿದು ವಾಸುದೇವವಿಟ್ಠಲನು ಬಾಲಿಗೆ
ಸುಳಿದು ಪೊರೆ ಎಂದು ತಿಳಿಸೋ ಏ ಪ್ರಿಯಾ ||
SrIvyAsatatvaj~jatIrthArya viracita
prArthanA suLAdi
rAga: pUrvikalyANi
dhruvatALa
ennaya nAyakIya svAmiya kaMDaMte
ninna nODalAyito prANapriya dUtane
cannAgi nODo ivaLa pariyannu
binnapa mADuve aparAdhagaLa
ninnaMta GaTakara innobbara kANe
manaviTTu nIneve vAsudEvaviTThalaMge
binnaisi kUDiso Ganna dayAnidhe || 1 ||
maTTatALa
patiya baLiyaliddu patiya manavariyaLo
atiSaya suKavittu viBava tOrisalAga
matiyali suKa ratiyali mana ubbi smRutiyanu kaLakoM –
DatuLaj~java mIri hita geLatiya muMde
ratiya suKava pELi pati vAsudEvaviTThala
patitaLu ivaLeMdu ati vyavahitanAdA || 2 ||
triviDitALa
satiyaroLagivaLu atimugdha vadhuvaLu
gata agatavoMdU matiyalli ariyaLo
Katiyannu tanage tA kRutisi kaMDavarali
ati bAyi biDuvaLo gatiyEnu idakinnu
ratipatipita vAsudEvaviTThalarEya
hitavAguvaMte upakRuti mADo hitane || 3 ||
aTTatALa
dhavabiTTa virahada BavaNiyiMda avaLige
navagaMdhagaLe baMdha suvastravE Sastra
BavanaveMboMde balu kuvanavAgivaLige
navacUta pallava savidhAvi pallava
vividha tApagaLanuBavisuva ivaLannu
BuvanESa SrIvAsudEvaviTThala pAda
suvimalatara naKa SaSi CaviyiMda pAliso
pravaNa nA mariyeno BuvanadoLage ninna || 4 ||
AditALa
anali bahuduvoMdu analakke bAradu
initaparAdhadi daNivade sAku kanisili bEDeMdu
munisinali hELeMbanu byAriddAne
anudina nI balli
vanajAkShiya tanumana asu uLiseMdu
vinayadi vAsudEvaviTThalage pELo || 5 ||
jate
olidu vAsudEvaviTThalanu bAlige
suLidu pore eMdu tiLisO E priyA ||
Leave a Reply