Composer : Shri Jagannatha dasaru
ಅಪಮೃತ್ಯು ಪರಿಹರಿಸೊ ಅನಿಲದೇವ
ಕೃಪಣ ವತ್ಸಲನೆ ಕಾಯ್ವರ ಕಾಣೆ ಜಗದೊಳಗೆ ||ಪ||
ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನವು ಎಮ್ಮನುದಾಸೀನ ಮಾಡುವುದು
ಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ ||೧||
ಕರಣಾಭಿಮಾನಿಗಳು ಕಿಂಕರರು ಮೂರ್ಲೋಕ
ದೊರೆಯು ನಿನ್ನೊಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರನೆ ನೀ ದಯಾಕರನೆಂದು ಪ್ರಾರ್ಥಿಸುವೆ ||೨|
ಭವರೋಗ ಮೋಚಕನೆ ಪವಮಾನರಾಯ ನಿ-
ನ್ನವರವನು ನಾನು ಮಾಧವ ಪ್ರಿಯನೆ
ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ ||೩||
ಜ್ಞಾನಾಯು ರೂಪಕನು ನೀನಹುದೊ, ವಾಣಿ ಪಂ-
ಚಾನನಾದ್ಯಮರರಿಗೆ ಪ್ರಾಣದೇವ
ದೀನವತ್ಸಲನೆಂದು ನಾನಿನ್ನ ಮೊರೆಹೊಕ್ಕೆ
ದಾನವಾರಣ್ಯ ಕೃಶಾನು ಸರ್ವದಾ ಎಮ್ಮ ||೪||
ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯನೆ
ವೇದವಾದೋದಿತ ಜಗನ್ನಾಥ ವಿಠ್ಠಲನ
ಪಾದ ಭಕುತಿಯನಿತ್ತು ಮೋದ ಕೊಡು ಸತತ ||೫||
apamRutyu parihariso aniladEva
kRupaNa vatsalane kAyvara kANe jagadoLage ||pa||
ninaginnu samarAda animitta bAMdhavaru
enagilla AvAva janumadalli
anudinavu emmanudAsIna mADuvudu
anucitavu jagadi sajjana SiKAmaNiye ||1||
karaNABimAnigaLu kiMkararu mUrlOka
doreyu ninnoLagippa sarvakAla
parisarane I BAgya doretanake sariyuMTe
guruvarane nI dayAkaraneMdu prArthisuve ||2|
BavarOga mOcakane pavamAnarAya ni-
nnavaravanu nAnu mAdhava priyane
javana bAdheya biDisu avaniyoLu sujanarige
divijagaNa madhyadali pravara nInahudayya ||3||
j~jAnAyu rUpakanu nInahudo, vANi paM-
cAnanAdyamararige prANadEva
dInavatsalaneMdu nAninna morehokke
dAnavAraNya kRuSAnu sarvadA emma ||4||
sAdhana SarIravidu nI dayadi koTTaddu
sAdhAraNavalla sAdhupriyane
vEdavAdOdita jagannAtha viThThalana
pAda Bakutiyanittu mOda koDu satata ||5||
Leave a Reply