Vyasatatvajnara chariya

Composer : Shri Karpara narahari dasaru

By Smt.Shubhalakshmi Rao

Shri Vyasatatvajnaru: 1704 to 1800
Ankita – Vasudeva Vittala
Aradhana day – Shravana Krishna Ashtami
Vrundavana – Veni Somapura
Ashrama Gurugalu – Sri Bhuvanendra Tirtharu
Vidya Shishyaru – Madanooru Vishnu Tirtharu
ಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |
ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||
prakaTIkRutaTIkOktirmakaTIkRutamAyirAT |
cakRutAvyAsatatvaj~jamakarIMdra kRupAmayi ||


ವ್ಯಾಸ ತತ್ವಜ್ಞರ ಚರಿಯಾ ಮನಕಾಶ್ಚರಿಯಾ
ಪರಮಹಂಸ ಕುಲಜ ಭುವನೇಂದ್ರರ ತನಯಾ ||ಪ||

ಶೇಷಗಿರೀಶ್ವರ ಕೃಪಯಾ ಐಜಿ ವ್ಯಾಸವೆಂಕಟ ನರ-
ಸಿಂಹಾಭಿಧೇಯ ಭೂಸುರೋತ್ತಮರಿಗೆ ತನಯಾ ನೆನಿಸಿ
ಭಾಸುರ ಕೀರ್ತಿಯ ಪಡೆದ ರಾಮಾರ್ಯ (೧)

ವೇಣಿ ಸೋಮಪುರ ನಿಲಯ ಪಾಹಿ
ಆನತ ಜನಸುರಧೇನೋ ಮಾಂಕೃಪಯಾ
ವೇಣು ಗೋಪಾಲನ ಪ್ರೀಯ ಎಂದು
ಧ್ಯಾನಿಪ ಜನರಘ ತಿಮಿರಕೆ ಸೂರ್ಯ (೨)

ಕೇಳಿವರ ಮಹಿಮೆ ಅಪಾರ
ಗದ್ವಾಲ ಭೂಪಗೆ ಬಂದ ಭಯ ಪರಿಹಾರ
ಪೇಳಲು ಶ್ಲೋಕಾರ್ಥ ಸಾರ ಕೃಷ್ಣಾ
ಮೇಲೆ ಪ್ರವಹಿಸಲು ಓಡಿತು ಶತೃನಿಕರ (೩)

ರಾಮ ಪದಾಂಬುಜ ಭೃಂಗ ತನ್ನ
ನೇಮದಿಂದಲಿ ಸೇವಿಪರ ಭವಭಂಗ
ಕಾಮಿತ ಫಲದ ಕೃಪಾಂಗ ಪರ ಬ್ರಹ್ಮ
ನಾನೆಂಬೊ ದುರ್ಮತ ಗಜಸಿಂಗ (೪)

ನಂದ ನಂದನ ಗುಣಸ್ತವನ ಮಾಳ್ಪ
ನಂದ ತೀರ್ಥರ ಮತಾಂಬುದಿ ಶೀತ ಕಿರಣ
ಒಂದಾರು ಜನರೊಳು ಕರುಣ ಕೃತ
ಮಂದ ನಂದಿನಿ ವ್ಯಜನಾದಿ ವ್ಯಾಖ್ಯಾನ (೫)

ಘನ್ನ ಮಹಿಮ ಜಿತಕಾಮಾ ಅ-
ರಣ್ಯ ಕಾಚಾರ್ಯ ಸೇವಿತ ಪದ ಪದುಮ
ಸನ್ನುತ ಶುಭ ಗುಣಸ್ತೋಮ ಮನವೇ
ಬಣ್ಣಿಸಲೊಶವೆ ಪಂಚಾಮೃತ ಮಹಿಮಾ (೬)

ವಾಸುದೇವನ ಗುಣತತಿಯ ಪೇಳಿ
ದಾಸ ಜನರಿಗೆ ಪಾಲಿಸಿದಿ ಸನ್ಮತಿಯಾ
ಭಾಸುರ ಕುಸುಮೂರ್ತಿರಾಯ ನೆನಿಸಿ
’ಶ್ರೀಶಕಾರ್ಪರ ನರಹರಿ’ ಗತಿ ಪ್ರೀಯ (೭)


vyAsa tatvaj~jara cariyA manakAScariyA
paramahaMsa kulaja BuvanEMdrara tanayA ||pa||

SEShagirISvara kRupayA aiji vyAsaveMkaTa nara-
siMhABidhEya BUsurOttamarige tanayA nenisi
BAsura kIrtiya paDeda rAmArya (1)

vENi sOmapura nilaya pAhi
Anata janasuradhEnO mAMkRupayA
vENu gOpAlana prIya eMdu
dhyAnipa janaraGa timirake sUrya (2)

kELivara mahime apAra
gadvAla BUpage baMda Baya parihAra
pELalu SlOkArtha sAra kRuShNA
mEle pravahisalu ODitu SatRunikara (3)

rAma padAMbuja BRuMga tanna
nEmadiMdali sEvipara BavaBaMga
kAmita Palada kRupAMga para brahma
nAneMbo durmata gajasiMga (4)

naMda naMdana guNastavana mALpa
naMda tIrthara matAMbudi SIta kiraNa
oMdAru janaroLu karuNa kRuta
maMda naMdini vyajanAdi vyAKyAna (5)

Ganna mahima jitakAmA a-
raNya kAcArya sEvita pada paduma
sannuta SuBa guNastOma manavE
baNNisaloSave paMcAmRuta mahimA (6)

vAsudEvana guNatatiya pELi
dAsa janarige pAlisidi sanmatiyA
BAsura kusumUrtirAya nenisi
‘SrISakArpara narahari’ gati prIya (7)

Leave a Reply

Your email address will not be published. Required fields are marked *

You might also like

error: Content is protected !!