Kande karunigalolage

Composer : Shri Gopaladasaru

By Smt.Shubhalakshmi Rao

Shri Vyasatatvajnaru: 1704 to 1800
Ankita – Vasudeva Vittala
Aradhana day – Shravana Krishna Ashtami
Vrundavana – Veni Somapura
Ashrama Gurugalu – Sri Bhuvanendra Tirtharu
Vidya Shishyaru – Madanooru Vishnu Tirtharu
ಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |
ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||
prakaTIkRutaTIkOktirmakaTIkRutamAyirAT |
cakRutAvyAsatatvaj~jamakarIMdra kRupAmayi ||


ಕಂಡೆ ಕರುಣಿಗಳೊಳಗೆ ಅಗ್ರೇಸರಪಾದ |
ಪಂಡಿತ ರಾಮಾರ್ಯರಾ |
ಕೊಂಡಾಡಲಿವರನಾ ಯಷ್ಟರಾನರ ನಾನು |
ಕಂಡೆ ಯನ್ನ ಮನ ಕುತ್ಸಹವಾಗಿ || ಪ ||

ಸಿರಿವೆಂಕಟ ನರಸಿಂಹಾಚಾರ್ಯರೆಂಬ |
ವರ ಕ್ಷೀರ ಶರಧಿಯಲ್ಲಿ |
ಪರಮ ಶೋಭಿತ ಚಂದ್ರನಂತೆ ಉದ್ಭವಿಸಿ ಸುಜ |
ನರಿಗೆ ಅಹಲ್ಲಾದವಾಗೀ | ವರ ವೇದ
ಶಾಸ್ತ್ರಗಳನೋದಿಸಿ ಶಿಷ್ಯ
ಜನಕೆ ವರದೊರದು ಉಪದೇಶಿಸಿ |
ಮರಿಯಾದೆ ಒಂದು ಕ್ಷಣ ಬಿಡದೆ ಹರಿಪರವಾಗಿ |
ಯಿರುವ ಮಹಾಸುಗುಣರನ್ನಾ ಯಿಂದು || ೧ ||

ಚರಣವೆಂದರೆ ಯಿವರ ಚರಣವೆ ಸುಖಕರಾ |
ಹರಿಯಾತ್ರ ಪರವಾಗಿನ್ನು |
ಕರಗಳೆಂದರೆ ಯಿವರ ಕರವೆ ಮಂಗಳಕರಾ |
ಹರಿ ಪೂಜೆಯಲ್ಲಿ ಸತತಾ |
ಕರಣಗಳು ಮುಂತಾದ
ಸರ್ವೇಂದ್ರಿಯಗಳಿಂದ |
ಹರಿಯನ್ನೆ ವಿಷಯನ್ನೆ ಕರಿಸಿ |
ಯಿರುವ ಅನುಭೋಗವು ಯಿರತೋರಿ ತಮ್ಮ ನಿಜ
ಕುರುಹ ನೋಡೆಂದು ಚಪ್ಪರಿಸಿ ಬಿಗಿದಪ್ಪಿದುದ || ೨ ||

ಯೇಸುಜನ್ಮದ ಸುಕೃತ ಯನಗಿವರ ಕರುಣ |
ವುಪದೇಶ ಸ್ವಪನದಿ ಆದುದಾ |
ಕೇಶವನೆ ಈ ರೂಪದಿಂದ ಪೇಳಿದನ್ಹ್ಯಾಗೊ
ಲೇಶನಾ ಅರಿದವನಲ್ಲಾ |
ದಾಸಗುರು ವಿಜಯರಾಯರೆ ಯಿಲ್ಲಿ ನಿಂದ್ಯೆನ್ನ |
ಪೋಷಿಸುವ ಬಗಿಯು ಹ್ಯಾಗೋ |
ವಾಸುದೇವ ಹಯಾಸ್ಯ ಗೋಪಾಲ ವಿಠಲನ |
ದಾಸರೊಳಗುತ್ತಮರ ದಯಕೆ ಸರಿಯುಂಟೆ || ೩ ||


kaMDe karuNigaLoLage agrEsarapAda |
paMDita rAmAryarA |
koMDADalivaranA yaShTarAnara nAnu |
kaMDe yanna mana kutsahavAgi || pa ||

siriveMkaTa narasiMhAcAryareMba |
vara kShIra Saradhiyalli |
parama SOBita caMdranaMte udBavisi suja |
narige ahallAdavAgI | vara vEda
SAstragaLanOdisi SiShya
janake varadoradu upadESisi |
mariyAde oMdu kShaNa biDade hariparavAgi |
yiruva mahAsuguNarannA yiMdu || 1 ||

caraNaveMdare yivara caraNave suKakarA |
hariyAtra paravAginnu |
karagaLeMdare yivara karave maMgaLakarA |
hari pUjeyalli satatA |
karaNagaLu muMtAda
sarvEMdriyagaLiMda |
hariyanne viShayanne karisi |
yiruva anuBOgavu yiratOri tamma nija
kuruha nODeMdu capparisi bigidappiduda || 2 ||

yEsujanmada sukRuta yanagivara karuNa |
vupadESa svapanadi AdudA |
kESavane I rUpadiMda pELidanhyAgo
lESanA aridavanallA |
dAsaguru vijayarAyare yilli niMdyenna |
pOShisuva bagiyu hyAgO |
vAsudEva hayAsya gOpAla viThalana |
dAsaroLaguttamara dayake sariyuMTe || 3 ||

Leave a Reply

Your email address will not be published. Required fields are marked *

You might also like

error: Content is protected !!