Oliyayya ranga oliyayya

Composer : Shri Prasannavenkata dasaru

By Smt.Shubhalakshmi Rao

ಒಲಿಯಯ್ಯಾ ರಂಗ ಒಲಿಯಯ್ಯಾ
ನೆಲೆಗಾಣದ ಭವಜಲದೊಳು ಮುಳುಗುವೆ [ಪ]

ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿ
ಆಯಾಸಬಡುತಿದೆ ಪ್ರಾಣದಾತ
ಬಾಯೆತ್ತಿ ಗೋವಿಂದ ಹರಿಯೆನ್ನಲೀಸದು
ಕಾಯೊ ದಯಾಳು ಕರಿವರದ ಕೃಷ್ಣ [೧]

ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿ
ಕ್ಷಣ ಕ್ಷಣ ದೈನ್ಯದಿ ಒರಲುತಿದೆ
ತನತನಗೆಳೆದು ದಣಿಸುವ ಇಂದ್ರಿಯ ಜಂತು
ಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ [೨]

ಬುದ್ಧಿ ತಪ್ಪಿದವಗೆ ಅಪದ್ಧ ನಡೆವವಗೆ
ಶುದ್ಧ ಕಾರಣ ದಿವ್ಯ ನಾಮವಲ್ಲವೆ
ಉದ್ಧರಿಸು ಬೇಗ ಪ್ರಸನ್ವೆಂಕಟ ಕೃಷ್ಣ
ತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ [೩]


oliyayyA raMga oliyayyA
nelegANada BavajaladoLu muLuguve [pa]

mAyada kaiyali mEle mEle sutti
AyAsabaDutide prANadAta
bAyetti gOviMda hariyennalIsadu
kAyo dayALu karivarada kRuShNa [1]

mana nIrAneya kaTTinoLage sikki
kShaNa kShaNa dainyadi oralutide
tanatanageLedu daNisuva iMdriya jaMtu
munisEvya ninnULigakke dUrAde kRuShNa [2]

buddhi tappidavage apaddha naDevavage
Suddha kAraNa divya nAmavallave
uddharisu bEga prasanveMkaTa kRuShNa
tiddiTTukoLLo ninnavage nirNaya nIne [3]

Leave a Reply

Your email address will not be published. Required fields are marked *

You might also like

error: Content is protected !!