Composer : Shri Prasannavenkata dasaru
ಬ್ಯಾಡಿರವ್ವ ಎನ್ನ ಕಂದನ್ನ ದೂರ ಬ್ಯಾಡಿರೆ
ಗಾರುಮಾಡಿ ಚೋರನೆಂದು ಸಾರಿ ತಂದ ದುರುಳನೆನ್ನ [ಪ.]
ಹಸಿದೆ ಮಗುವೆ ಹಸಿದೆ ಚಿನ್ನ ಶಿಶುವೆ ಪಾಲ್ಗುಡಿಯ ಬಾರೆನ್ನೆ
ಮಿಸುಣಿ ಬಟ್ಟಲೊಳಿಪ್ಪ ಪಾಲಿನ ಬಿಸಿಗೆ ಬೊಯೆಂದು ಬೆದರುವ |
ಮೊಸರು ಹರವಿಯೊಡೆದು ನಿಮ್ಮ ಪೊಸ ಬೆಣ್ಣೆಯ ಮೆಲುವನೆಂತೊ
ಸೊಸೆಯರೊಂದು ಗೂಡೆನ್ನ ಕೂಸಿಗೆ ಪುಶಿಯ ವಾಕು ನುಸಿಸಿ ದೂರ [೧]
ಮುದ್ದು ತಾರೊ ರಂಗ ಎನಲು ಎದ್ದು ಚಪ್ಪಳೆಗಳಿಡುತ
ಬಿದ್ದು ಅಂಬೆಗಾಲನಿಕ್ಕಿ ಮುದ್ದು ನೀಡಲರಿಯನೆ
ಕದ್ದು ನಿಮ್ಮನೆ ಕೆನೆವಾಲನು ಗೆದ್ದು ನಿಮ್ಮ ಬಾಲರ ಬೆನ್ನ
ಗುದ್ದಿ ಓಡಿ ಬರುವನೆಂತೊ ಬುದ್ಧಿ ಇಲ್ಲವೆನೆ ನಿಮಗೆ [೨]
ಎತ್ತಿಕೊಂಡು ರಂಮಿಸಿ ಬಾಯೊಳು ತುತ್ತು ನಿಡಲು ಉಣ್ಣಲರಿಯ
ಕತ್ತಲೆಯೊಳು ಹೆಂಗಳ ಪಿಡಿದು ಚಿತ್ತ ಮೋಹಿಸ ಬಲ್ಲನೆ
ಹೆತ್ತ ಮಕ್ಕಳಿಲ್ಲವೆ ನಿಮಗೆ ವ್ಯರ್ಥ ಜಾರನೆನ್ನುವಿರಮ್ಮ
ಕರ್ತೃ ಶ್ರೀ ಪ್ರಸನ್ವೆಂಕಟರಾಯಗೆ ಭಕ್ತವತ್ಸಲ ತಾನಲ್ಲೆಂದು [ ೩]
byADiravva enna kaMdanna dUra byADire
gArumADi cOraneMdu sAri taMda duruLanenna [pa.]
haside maguve haside cinna SiSuve pAlguDiya bArenne
misuNi baTTaloLippa pAlina bisige boyeMdu bedaruva |
mosaru haraviyoDedu nimma posa beNNeya meluvaneMto
soseyaroMdu gUDenna kUsige pushiya vAku nusisi dUra [1]
muddu tAro raMga enalu eddu cappaLegaLiDuta
biddu aMbegAlanikki muddu nIDalariyane
kaddu nimmane kenevAlanu geddu nimma bAlara benna
guddi ODi baruvaneMto buddhi illavene nimage [2]
ettikoMDu raMmisi bAyoLu tuttu niDalu uNNalariya
kattaleyoLu heMgaLa piDidu citta mOhisa ballane
hetta makkaLillave nimage vyartha jAranennuviramma
kartRu shrI prasanveMkaTarAyage Baktavatsala tAnalleMdu [ 3]
Leave a Reply