Composer : Shri Purandara dasaru
ಆಡಿದನೋ ರಂಗ ಅದ್ಭುತದಿಂದಲಿ
ಕಾಳಿಂಗನ ಫಣೆಯಲಿ ||ಪ||
ಪಾಡಿದವರಿಗೆ ಬೇಡಿದ ವರಗಳ
ನೀಡುತಲಿ ದಯ ಮಾಡುತಲಿ ನಲಿ-
ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ||ಆ||
ಅಂಬುರುಹೋದ್ಭವ ಅಖಿಳ ಸುರರು ಕೂಡಿ
ಅಂಬರದಲಿ ನಿಂತು ಅವನ ಸ್ತುತಿಸೆ
ರಂಭೆ ಊರ್ವಶಿ ರಮಣಿಯರೆಲ್ಲರು
ಚಂದದಿಂ ಭರತನಾಟ್ಯವ ನಟಿಸೆ
ಝಂತಕ ತಕಧಿಮಿ ತಧಿಗಿಣಿ ತೋಂ ಎಂದು
ಝಂಪೆ ತಾಳದಿ ತುಂಬುರುನೊಪ್ಪಿಸೆ
ಧಾ ಮ ಪ ಧ ಸ ರೀ ಎಂದು ಧ್ವನಿಯಿಂದ
ನಾರದ ತುಂಬುರ ಗಾನ ಮಾಡಲು
ನಂದಿಯು ಮದ್ದಲೆ ಚೆಂದದಿ ಹಾಕಲು |೧|
ಫಣವ ಮೆಟ್ಟಿ ಬಾಲವ ಕೈಯಲಿ ಪಿಡಿದು
ಫಳ ಫಳಿಸುತ್ತ ನಾಟ್ಯವನಾಡೆ
ಚಂದ್ರ ಮಂಡಲದಂತೆ ಹೊಳೆಯುವ
ಮುಖದೊಳು ಚಲಿಸುವ ನೀಲ ಕೇಶಗಳಾಡೆ
ಗೆಜ್ಜೆ ಘಲುಕೆನುತ ಉಡಿಗೆಜ್ಜೆ ಘಂಟೆಗಳು ಆಡಲು
ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ
ಪುಟ್ಟ ಪಾದವ ಇಟ್ಟು ಶ್ರೀ ಕೃಷ್ಣನು
ಮೆಟ್ಟಿದನು ತಕ ಧಿಮಿ ತಧಿಕೆನುತ |೨|
ಸುರರು ಪುಷ್ಪದ ವೃಷ್ಟಿಯ ಕರೆಯಲು
ಸುದತಿಯರೆಲ್ಲರು ಪಾಡಲು
ನಾಗ ಕನ್ನಿಕೆಯರು ನಾಥನ ಬೇಡಲು
ನಾನಾ ವಿಧದಿ ಸ್ತುತಿ ಮಾಡಲು
ರಕ್ಕಸರೆಲ್ಲರು ಕಕ್ಕಸವನೆ ಕಂಡು
ದಿಕ್ಕು ದಿಕ್ಕುಗಳಿಗೆ ಓಡಲು
ಚಿಕ್ಕವನಿವನಲ್ಲ ಪುರಂದರ ವಿಠ್ಠಲ
ವೆಂಕಟರಮಣನೆ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಕೃಷ್ಣನ |೩|
ADidanO raMga adButadiMdali
kALiMgana PaNeyali ||pa||
pADidavarige bEDida varagaLa
nIDutali daya mADutali nali-
dADutali beNNe bEDutali kRuShNa ||A||
aMburuhOdBava aKiLa suraru kUDi
aMbaradali niMtu avana stutise
raMBe UrvaSi ramaNiyarellaru
caMdadiM BaratanATyava naTise
JaMtaka takadhimi tadhigiNi tOM eMdu
JaMpe tALadi tuMburunoppise
dhA ma pa dha sa rI eMdu dhvaniyiMda
nArada tuMbura gAna mADalu
naMdiyu maddale ceMdadi hAkalu |1|
PaNava meTTi bAlava kaiyali piDidu
PaLa PaLisutta nATyavanADe
caMdra maMDaladaMte hoLeyuva
muKadoLu calisuva nIla kESagaLADe
gejje Galukenuta uDigejje GaMTegaLu ADalu
duShTa kALiMgana meTTi BaradiMda
puTTa pAdava iTTu SrI kRuShNanu
meTTidanu taka dhimi tadhikenuta |2|
suraru puShpada vRuShTiya kareyalu
sudatiyarellaru pADalu
nAga kannikeyaru nAthana bEDalu
nAnA vidhadi stuti mADalu
rakkasarellaru kakkasavane kaMDu
dikku dikkugaLige ODalu
cikkavanivanalla puraMdara viThThala
veMkaTaramaNane bEga yaSOde
biMkadoLetti muddADe kRuShNana |3|
Leave a Reply