Nadire Nadire

Composer : Shri Mahipati dasaru

Smt.Viraja

ನಡಿರೆ ನಡಿರೆ ನೋಡುವ ಶ್ರೀಕೃಷ್ಣನ್ನ
ನಡಿರೆ ನಡಿರೆ ನೋಡುವ [ಪ]

ನಡಿರೆ ನೋಡುವ ಬನ್ನಿ ದುಡುಕು ಶ್ರೀ ಕೃಷ್ಣನ
ಅಡಿಗಳಾಶ್ರಯ ಹಿದಿವ ಮಂಡಲದೊಳು [ಅ.ಪ]

ದುಡುಕುತನದಿ ಬಂದು ಕಡೆದ ಬೆಣ್ಣೆಯ ಮೆದ್ದು ,
ಒಡನೆ ಗೋಪ್ಯರ ಕಾಡಿದ ನೋಡಮ್ಮ
ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ
ತಡೆಯದೆ ದುಮುಕಿದ ಮಡುವಿನೊಳು ರಂಗ |೧|

ಬೇಡಿಸಿ ಗೋಪ್ಯರ ಉಡುಗೆ ಸೆಳೆದುಕೊಂಡು
ಓಡನೆ ಗಿಡವನೇರಿದ ನೋಡಮ್ಮ
ಮಾಡಿದ ಮಡಿ ತಾ ಬಿಡದೆ ಬೇಡಿಸಿಕೊಂಡು
ಒಡನೆ ಉಡುಗೆ ನೀಡಿದ ನೋಡಮ್ಮ |೨|

ಬಡವರಿಗಳವಲ್ಲ ಪೊಡವಿಯೊಳಗೆ ಇದು
ಆಡಿದಾನಂದ ತಾಂಡವ ನೋಡಮ್ಮ
ಹಿಡಿಯ ಹೋಗಲು ಮೂಢ ಮಹಿಪತಿಯ ನೋಡಿ
ಒಡಲ ಹೊಕ್ಕು ಕೂಡಿದನೊಡೆಯ ನಮ್ಮ |೩|


naDire naDire nODuva shrIkRuShNanna
naDire naDire nODuva [pa]

naDire nODuva banni duDuku shrI kRuShNana
aDigaLAshraya hidiva maMDaladoLu [a.pa]

duDukutanadi baMdu kaDeda beNNeya meddu ,
oDane gOpyara kaaDida nODamma
biDade kaaLiMgana heDeya meTTida nODi
taDeyade dumukida maDuvinoLu raMga |1|

bEDisi gOpyara uDuge seLedukoMDu
ODane giDavanErida nODamma
mADida maDi tA biDade bEDisikoMDu
oDane uDuge neeDida nODamma |2|

baDavarigaLavalla poDaviyoLage idu
ADidAnaMda tAMDava nODamma
hiDiya hOgalu mooDha mahipatiya nODi
oDala hokku kUDidanoDeya namma |3|

Leave a Reply

Your email address will not be published. Required fields are marked *

You might also like

error: Content is protected !!