Composer : Shri Purandara dasaru
ಹೆಂಡಿರನಾಳುವಳೀ ಕನ್ನಿಕೆ
ಗಂಡನಿಲ್ಲದ ಹೆಂಗಸೀ ಕನ್ನಿಕೆ ||ಪ||
ಮೇರು ಮಂದರವ ಕಡೆಗೋಲನೆ ಮಾಡಿ
ಉರಗ ವಾಸುಕಿಯ ನೇಣುಮಾಡಿ
ಕ್ಷೀರಾಂಬುಧಿ ಸುರರಸುರರು ಮಥಿಸಲು
ಕೂರುಮ ರೂಪವ ಧರಿಸಿದ ಕನ್ನಿಕೆ |೧|
ಶಿಶುರೂಪವ ತಾಳಿ ಆಲದೆಲೆಯ ಮೇಲೆ
ಆ ಸಮಯದಿ ಜಲದೊಳ್ ಮಲಗಿಕೊಂಡು
ವಶವಾಗದ ಮುನ್ನ ಹೂವಿನ್ ಹೊಕ್ಕಳಲ್ಲಿ
ಬಸಿರಿಂದ ಬೊಮ್ಮನ ಪಡೆದಾ ಕನ್ನಿಕೆ |೨|
ಪಟ್ಟಾವಳಿಯನುಟ್ಟು ಬೊಟ್ಟಾ ಕುಪ್ಪಸ ತೊಟ್ಟು
ಬೊಟ್ಟ ಗಿಂಡಿಯ ಕೈಲಿ ಹಿಡಿದುಕೊಂಡು
ದಿಟ್ಟ ಸ್ತ್ರೀ ರೂಪವ ತಾಳಿ ದೈತ್ಯರನೆಲ್ಲ
ಅಟ್ಟಹಾಸದಿ ಮೋಹಿಸಿದ ಕನ್ನಿಕೆ |೩|
ಅಂಥ ಇಂಥವನೆಂದು ಕೇಳುತ್ತ ಇರಲಾಗಿ
ಸಂತತ ಸುರರಿಗೆ ಅಮೃತವನು
ಪಂಕ್ತಿಯೊಳಗೆ ಅಳವಡಿಸದೆ ಬಡಿಸಿದ
ಎಂಥಾ ಸೊಬಗಿನ ಮೋಹದ ಕನ್ನಿಕೆ |೪|
ಬೀಗೆಗಣ್ಣನಿಗೆ ಬಿಸಿ ಕೈಯನಿಡಲು ಬರೆ
ಭೋಗದಾಸೆಯ ತೋರಿ ಬೂದಿ ಮಾಡ್ದ
ಭಾಗೀರತಿ ಪಿತ ಪುರಂದರವಿಠಲ
ಭೋಗಿ ಬೇಲೂರ ಚೆನ್ನಿಗ ಕನ್ನಿಕೆ |೫|
heMDiranALuvaLI kannike
gaMDanillada heMgasI kannike ||pa||
mEru maMdarava kaDegOlane mADi
uraga vAsukiya nENumADi
kShIrAMbudhi surarasuraru mathisalu
kUruma rUpava dharisida kannike |1|
SiSurUpava tALi Aladeleya mEle
A samayadi jaladoL malagikoMDu
vaSavAgada munna hUvin hokkaLalli
basiriMda bommana paDedA kannike |2|
paTTAvaLiyanuTTu boTTA kuppasa toTTu
boTTa giMDiya kaili hiDidukoMDu
diTTa strI rUpava tALi daityaranella
aTTahAsadi mOhisida kannike |3|
aMtha iMthavaneMdu kELutta iralAgi
saMtata surarige amRutavanu
paMktiyoLage aLavaDisade baDisida
eMthA sobagina mOhada kannike |4|
beegegaNNanige bisi kaiyaniDalu bare
BOgadAseya tOri bUdi mADda
BAgIrati pita puraMdaraviThala
BOgi bElUra cenniga kannike |5|
Leave a Reply