Hayavadanana pada

Composer : Shri Vadirajaru

By Smt.Shubhalakshmi Rao

ಹಯವದನನ ಪಾದದ್ವಯವ ನೆನೆಯದವ
ಜಯಿಸುವನೆಂತೋ ಸಂಸೃತಿ ಫಲವ ||ಪ.||

ಕಾಗೆಯಂತಾದರು ಬಿದ್ದರು ಎದ್ದರು
ಯೋಗದೊಳಿದ್ದರು ಬಿದ್ದವನೆ
ಆಗಮವನು ತಂದು ಅಜನಿಗೆ ಬೋಧಿಸಿದಾ
ಗುಣನಿಧಿಯ-ನರ್ಚಿಸದವನು [೧]

ಬೂದಿಗೆ ವಾದಿಸಿ ಮಣ್ಣ ಮೇಲುಣ್ಣಲು
ಸಾಧಿಪುದೇನವ ಶ್ರವ ಶ್ರಾವಕ ವ್ರತವ
ಬೂದಿಯ ಮಾಡಿದ ಮಣ್ಣಿನ ಗಂಡನ
ಹಾದಿಯನೊಲ್ಲದ ಹಂಚುನರ [೨]

ಉಟ್ಟದ ಬಿಟ್ಟು ತನ್ನಟ್ಟಲು ಬಟ್ಟೆಯ
ಕಷ್ಟ ತಾ ಬಟ್ಟು ಕಂಗೆಟ್ಟನೈಸೆ
ಸೃಷ್ಟಿಸಿ ಸಲಹುವ ಹಯವದನನ ಪರಿ-
ತುಷ್ಟಿಗೆ ಪುಟ್ಟದ ದುಷ್ಟ ಪಶು [೩]


hayavadanana pAdadvayava neneyadava
jayisuvaneMtO saMsRuti phalava ||pa.||

kAgeyaMtAdaru biddaru eddaru
yOgadoLiddaru biddavane
Agamavanu taMdu ajanige bOdhisidA
guNanidhiya-narcisadavanu [1]

bUdige vAdisi maNNa mEluNNalu
sAdhipudEnava Srava SrAvaka vratava
bUdiya mADida maNNina gaMDana
hAdiyanollada haMcunara [2]

uTTada biTTu tannaTTalu baTTeya
kaShTa tA baTTu kaMgeTTanaise
sRuShTisi salahuva hayavadanana pari-
tuShTige puTTada duShTa paSu [3]

Leave a Reply

Your email address will not be published. Required fields are marked *

You might also like

error: Content is protected !!