Hayagreeva devara Suladi – Vijayadasaru

By Smt.Nandini Sripad , Blore

ಶ್ರೀ ವಿಜಯದಾಸರ ಕೃತಿ
ಶ್ರೀ ಹಯಗ್ರೀವ ದೇವರ ಸ್ತೋತ್ರ ಸುಳಾದಿ
ರಾಗ: ಸಾರಂಗ
ಧ್ರುವತಾಳ

ಜಯ ಜಯ ಜಾನ್ಹವಿ ಜನಕ ಜಗದಾಧಾರ
ಭಯನಿವಾರಣ ಭಕ್ತ ಫಲದಾಯಕ
ದಯಾಪಯೋನಿಧಿ ಧರ್ಮಪಾಲ ದಾನವ ಕಾಲ –
ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ –
ಶ್ರಯ ಸಂತರ ಕಾಮಧೇನು ಧೇನುಕ ಭಂಜ
ವ್ಯಯದೂರ ವ್ಯಾಧಿಹರಣ ವ್ಯಾಪ್ತ ವ್ಯಾಕುಲಹಾರಿ
ಪ್ರಿಯ ಪ್ರೇರಕ ಪ್ರಥಮ ಪ್ರಾಪ್ತಿ ಪ್ರಾಣ
ಜಯದೇವಿ ರಮಣ ಜಯ ಜಯ ಜಯಾಕಾರ
ಸುಯತಿಗಳ ಮನೋಹಾರ ಮಂದಹಾಸ ಚಂದ್ರೋ –
ದಯ ಭಾಸ ಪೂರ್ಣಶಕ್ತಿ ಸರ್ವ ರೂಪ
ತ್ರಯ ಕಾಯ ತತ್ವ ತತ್ವ ತದಾಕಾರ ಮೂರುತಿ
ಕ್ರಿಯ ಗುಣಾನಂತ ರೂಪಾನಂತ ಏಕಾನೇಕ ಸಮಸ್ತ
ಸಯವಾಗಿಪ್ಪ ಸಮ ಅಸಮ ದೈವಾ
ಹಯಮೊಗ ವಾದಿರಾಜಗೊಲಿದ ವಿಜಯವಿಠ್ಠಲ
ಪಯೋನಿಧಿ ಶಯನ ಸತ್ವನಿಯಾಮಕ || ೧ ||

ಮಟ್ಟತಾಳ
ಶಶಿ ಮಂಡಲ ಮಂದಿರ ಮಧ್ಯದಲಿ ನಿತ್ಯ
ಮಿಸುಣಿಪ ಶುಭಕಾಯಾ ಯೋಗಾಸನನಾಗಿ
ಎಸುಳುಗಂಗಳ ಚೆಲುವ ಹುಂಕರಿಸುವನಾದ
ಬಿಸಜಾಕ್ಷ ಪುಸ್ತಕ ಜ್ಞಾನ ಮುದ್ರಾ
ಎಸೆವ ಚತುರ ಬಾಹು ಕೊರಳ ಕೌಸ್ತುಭ ಮಾಲೆ
ಶಶಿಮುಖಿಯರು ಒಲಿದು ಸೇವೆಮಾಡುತಲಿರೆ
ಅಸುರರ ಕಾಳಗವ ಕೆಣಕುವ ಕಾಲ್ಗೆದರಿ
ದಶದಿಶ ಕಂಪಿಸಲು ಖುರಪುಟದ ರಭಸ
ಪುಸಿಯಲ್ಲ ನಮಗೆ ಪರದೇವತಿ ಇದೇ
ಕುಶಮೊನೆ ಮನದಲ್ಲಿ ಧ್ಯಾನಮಾಡಲಿಬೇಕು
ಹಸನಾಗಿ ಕೇಳಿ ಮುದದಿ ವಾದಿರಾಜಾ
ಮಸಕರಿಗೆ ವಲಿದ ವಿಜಯವಿಠ್ಠಲರೇಯಾ
ಕುಶಲವ ಕೊಡುವನು ಈ ಪರಿ ಕೊಂಡಾಡೆ || ೨ ||

ತ್ರಿವಿಡಿತಾಳ
ನಾಶಿಕ ಪುಟದಿಂದ ಸರ್ವ ವೇದಾರ್ಥಂಗಳು
ಶ್ವಾಸೋಚ್ಛ್ವಾಸದಿಂದ ಪೊರಡುತಿವಕೋ
ಏಸುಬಗೆ ನೋಡು ಇದೇ ಸೋಜಿಗವೆಲ್ಲಾ
ಶ್ರೀಶನ್ನ ಸಮಸ್ತ ದೇಹದಿಂದ
ಭಾಸುರವಾಗಿದ್ದ ಸಾಕಲ್ಯ ಶ್ರುತಿ ತತಿ
ಲೇಶ ಬಿಡದೆ ಪೊರಟು ಬರುತಿಪ್ಪವು
ಈ ಸಾಮರ್ಥಿಕೆ ನೋಡು ಅನ್ಯದೇವಕೆ ಉಂಟೆ
ಈಶನಯ್ಯಗೆ ಉಪದೇಶ ಮಾಳ್ಪ
ದೇಶ ಕಾಲವೆ ಮೀರಿ ತನಗೆ ತಾನೆ ಇಪ್ಪಾ
ಏಸು ಕಲ್ಪಕೆ ಸರ್ವ ಸ್ವಾತಂತ್ರನೋ
ಮೋಸ ಪೋಗುವನಲ್ಲ ಆರಾರ ಮಾತಿಗೆ
ಕೇಶವ ಕ್ಲೇಶ ನಾಶನ ಕಾಣಿರೋ
ದ್ವೇಷವ ತಾಳಿ ಆಗಮ ವೈದವನ
ರೋಷದಿಂದಲಿ ಕೊಂದ ನಿಷ್ಕಪಟಿಯೋ
ಸೂಸುವ ಬಾಯಿಂದ ಸುರಿಯುವ ಜೊಲ್ಲು ಪೀ –
ಯೂಷಕ್ಕಧಿಕ ಕಾಣೋ, ಸವಿದುಣ್ಣಿರೋ
ವಾಸುದೇವನೆ ಈತನೆ ಆವಲ್ಲಿಪ್ಪನೆಂದು
ಬೇಸರವಗೊಂಡು ಬಳಲದಿರೀ
ಈ ಶರೀರದಲ್ಲಿ ಜೀವಾಂತರ್ಗತನಾಗಿ
ವಾಸವಾಗಿಹನು ಅಣುಮಹ ಕಾಣೋ
ಹ್ರಾಸ ವೃದ್ಧಿಗಳಿಲ್ಲ ವಿಶೇಷ ಅವಿಶೇಷ
ಈಸು ಬಗೆಯುಳ್ಳರೆ ಸ್ವರೂಪ ಭೂತ
ದೋಷರೂಪಗಳಲ್ಲಿ ಜ್ಞಾನಾನಂದ ಕಾರ್ಯ
ದಾಸರಿಗಾಗಿ ಈ ಪರಿ ಮಾಡುವ
ಆಶಾಬದ್ಧನು ಅಲ್ಲ ಆಪ್ತಕಾಮನು ಕಮ –
ಲಾಸನ್ನ ಜನಕ ಸರ್ವ ಭೂಷಿತಾ
ಲೇಸು ವಾದಿರಾಜ ವಂದ್ಯ ವಿಜಯವಿಠ್ಠಲ
ಸಾಸಿರನಾಮದ ಒಡೆಯ ಹಯವದನಾ|| ೩ ||

ಅಟ್ಟತಾಳ
ಸುರರಿಗೆ ಹಯವಾಗಿ ಗೆಲಿಸುವನು ಗಂಧ –
ರ್ವರಿಗೆ ವಾಜಿಯಾಗಿ ಪೋಗುವ ಮುಂಚಾಗಿ
ದುರುಳ ದಾನವರಿಗೆ ಅರ್ವನಾಗಿ ತಾನು
ಇರದೆ ಪರಾಭವನಾಗುವ ಸಿಗದಲೆ
ನರರಿಗೆ ಅಶ್ವನೆಂದೆನಿಸಿ ಮಹಾಭಾರ
ಹೊರುವ ದಣವಿಕೆ ಇಲ್ಲದೆ ಅವರ
ಪರಮ ಪುರುಷನ್ನ ಅದ್ಭುತ ಚರಿತೆ ಕೇಳಿ
ಅರಿವುದು ಮನದಲ್ಲಿ ಸರ್ವಜೀವಿಗಳೊಳು
ಇರಳು ಹಗಲು ಈ ಪರಿಯಾಗಿ ಮಾಡುವ
ಮರಿಯಾದೆ ಇಪ್ಪದು ಮರಿಯಾದೆ ಸ್ಮರಿಸಿ ಪಾ –
ಮರ ಬುದ್ದಿ ಪೋಗಾಡಿ ತುರಿಯಾಶ್ರಮಮಣಿ ವಾ –
ದಿರಾಜ ಯತಿಕರದಿಂದರ್ಚನೆಗೊಂಡ
ವಿಜಯವಿಠ್ಠಲರೇಯಾ ತುರಗಾಸ್ಯನು ಕಾಣೋ
ತೃಪ್ತಿಯ ಕೊಡುವನು || ೪ ||

ಆದಿತಾಳ
ಶಿತವರ್ಣದಲಿ ಸತ್ವಗುಣದಲ್ಲಿ
ಜಾತವೇದಸಂಗೆ ಆಹುತಿಯನ್ನೂ ಕೊಡುವಲ್ಲಿ
ಭೂತಳದಲ್ಲಿ ಮತ್ತೆ ಜಠರಾಗ್ನಿಯಲ್ಲಿ
ಆತುಮದಲ್ಲಿ ವಿತ್ತ ಪತಿಯಲ್ಲಿ ಹೇಳನ
ಪಾತಕ ಪೋಗುವಲ್ಲಿ ವಂಜರ ನದಿಯಲ್ಲಿ
ಸೋತ್ತಮರಲ್ಲಿ ವೇದ ಓದುವ ಠಾವಿನಲ್ಲಿ
ಮಾತು ಪೂರ್ವರಂಗದಲ್ಲಿ ಭದ್ರಾಶ್ವ ಖಂಡದಲ್ಲಿ
ಜ್ಯೋತಿ ಪ್ರಕಾಶದಲ್ಲಿ ಮನಿಯ ದ್ವಾರದಲ್ಲಿ
ನೇತುರ ರೇಖೆಯಲ್ಲಿ ನಾಶಿಕ ಪುಟದಲ್ಲಿ
ದಾತನಲ್ಲಿ ಸರ್ವಜೀವರಲ್ಲಿ ನಿವಾಸಾ
ನೀತವಾಗಿ ಎಣಿಸು ನಿರ್ಣೈಸುವುದಕ್ಕೆ
ಶ್ರೀತರುಣಿಗಾದರೂ ಗೋಚರಿಸದು ಕಾಣೋ
ಈತನ ನೆನೆದರೆ ಬೇಡಿದ ಪುರುಷಾರ್ಥ
ಮಾತುಮಾತಿಗೆ ತಂದುಕೊಡುವ ಸರ್ವದಾ
ಆತುಮದೊಳಗಿದ್ದು ಆನಂದ ಕೊಟ್ಟು ಪಾಲಿಪ
ಶೀತಾಂಶು ಮಂಡಲವದನ ವಿಜಯವಿಠ್ಠಲರೇಯಾ
ಪ್ರೀತಿಯಾಗಿ ಇಪ್ಪಾ ವಾದಿರಾಜಗೆ ಹಯವದನಾ || ೫ ||

ಜತೆ
ಗುರು ವಾದಿರಾಜಗೆ ವಲಿದ ಹಯವದನಾ
ಕರುಣಾಕರ ಮೂರ್ತಿ ವಿಜಯವಿಠ್ಠಲರೇಯಾ || ೬ ||


SrI vijayadAsara kRuti
SrI hayagrIva dEvara stOtra suLAdi
rAga: sAraMga
dhruvatALa

jaya jaya jAnhavi janaka jagadAdhAra
BayanivAraNa Bakta PaladAyaka
dayApayOnidhi dharmapAla dAnava kAla –
traya hatteMTu mIrida trailOkanAtha A –
Sraya saMtara kAmadhEnu dhEnuka BaMja
vyayadUra vyAdhiharaNa vyApta vyAkulahAri
priya prEraka prathama prApti prANa
jayadEvi ramaNa jaya jaya jayAkAra
suyatigaLa manOhAra maMdahAsa caMdrO –
daya BAsa pUrNaSakti sarva rUpa
traya kAya tatva tatva tadAkAra mUruti
kriya guNAnaMta rUpAnaMta EkAnEka samasta
sayavAgippa sama asama daivA
hayamoga vAdirAjagolida vijayaviThThala
payOnidhi Sayana satvaniyAmaka || 1 ||

maTTatALa
SaSi maMDala maMdira madhyadali nitya
misuNipa SuBakAyA yOgAsananAgi
esuLugaMgaLa celuva huMkarisuvanAda
bisajAkSha pustaka j~jAna mudrA
eseva catura bAhu koraLa kaustuBa mAle
SaSimuKiyaru olidu sEvemADutalire
asurara kALagava keNakuva kAlgedari
daSadiSa kaMpisalu KurapuTada raBasa
pusiyalla namage paradEvati idE
kuSamone manadalli dhyAnamADalibEku
hasanAgi kELi mudadi vAdirAjA
masakarige valida vijayaviThThalarEyA
kuSalava koDuvanu I pari koMDADe || 2 ||

triviDitALa
nASika puTadiMda sarva vEdArthaMgaLu
SvAsOcCvAsadiMda poraDutivakO
Esubage nODu idE sOjigavellA
SrISanna samasta dEhadiMda
BAsuravAgidda sAkalya Sruti tati
lESa biDade poraTu barutippavu
I sAmarthike nODu anyadEvake uMTe
ISanayyage upadESa mALpa
dESa kAlave mIri tanage tAne ippA
Esu kalpake sarva svAtaMtranO
mOsa pOguvanalla ArAra mAtige
kESava klESa nASana kANirO
dvEShava tALi Agama vaidavana
rOShadiMdali koMda niShkapaTiyO
sUsuva bAyiMda suriyuva jollu pI –
yUShakkadhika kANO, saviduNNirO
vAsudEvane Itane AvallippaneMdu
bEsaravagoMDu baLaladirI
I SarIradalli jIvAMtargatanAgi
vAsavAgihanu aNumaha kANO
hrAsa vRuddhigaLilla viSESha aviSESha
Isu bageyuLLare svarUpa BUta
dOSharUpagaLalli j~jAnAnaMda kArya
dAsarigAgi I pari mADuva
ASAbaddhanu alla AptakAmanu kama –
lAsanna janaka sarva BUShitA
lEsu vAdirAja vaMdya vijayaviThThala
sAsiranAmada oDeya hayavadanA|| 3 ||

aTTatALa
surarige hayavAgi gelisuvanu gaMdha –
rvarige vAjiyAgi pOguva muMcAgi
duruLa dAnavarige arvanAgi tAnu
irade parABavanAguva sigadale
nararige aSvaneMdenisi mahABAra
horuva daNavike illade avara
parama puruShanna adButa carite kELi
arivudu manadalli sarvajIvigaLoLu
iraLu hagalu I pariyAgi mADuva
mariyAde ippadu mariyAde smarisi pA –
mara buddi pOgADi turiyASramamaNi vA –
dirAja yatikaradiMdarcanegoMDa
vijayaviThThalarEyA turagAsyanu kANO
tRuptiya koDuvanu || 4 ||

AditALa
SitavarNadali satvaguNadalli
jAtavEdasaMge AhutiyannU koDuvalli
BUtaLadalli matte jaTharAgniyalli
Atumadalli vitta patiyalli hELana
pAtaka pOguvalli vaMjara nadiyalli
sOttamaralli vEda Oduva ThAvinalli
mAtu pUrvaraMgadalli BadrASva KaMDadalli
jyOti prakASadalli maniya dvAradalli
nEtura rEKeyalli nASika puTadalli
dAtanalli sarvajIvaralli nivAsA
nItavAgi eNisu nirNaisuvudakke
SrItaruNigAdarU gOcarisadu kANO
Itana nenedare bEDida puruShArtha
mAtumAtige taMdukoDuva sarvadA
AtumadoLagiddu AnaMda koTTu pAlipa
SItAMSu maMDalavadana vijayaviThThalarEyA
prItiyAgi ippA vAdirAjage hayavadanA || 5 ||

jate
guru vAdirAjage valida hayavadanA
karuNAkara mUrti vijayaviThThalarEyA || 6 ||

Leave a Reply

Your email address will not be published. Required fields are marked *

You might also like

error: Content is protected !!