Enjalava baleda Shri Hari

Composer : Shri Purandara dasaru

By Smt.Shubhalakshmi Rao

ಎಂಜಲವ ಬಳೆದ ಶ್ರೀಹರಿ
ರಾಜಿಸುವ ರಂಜಿಸುವ ರಾಜಸೂಯ ಯಾಗದಿ [ಅ.ಪ]

ಉಟ್ಟ ಪೀತಾಂಬರ ಮೇಲಕ್ಕೆ ಕಟ್ಟಿ
ಕಟ್ಟಿದ್ದ ಹಾರಗಳ ಹಿಂದಕ್ಕೆ ಸರಿಸಿ
ಸಾಲಾಗಿ ಮಣೆಗಳ ಇಟ್ಟು ಎಲೆಯ ಹಾಕಿ
ರಂಗೋಲಿ ಕೊಳವೆಯ ಎಳೆದು ತಾ ನಿಂತ [೧]

ಬಾರಿಗೆ ಹಿಡಿದು ಕಸವನ್ನೆ ಗುಡಿಸಿ
ನೀರೊಳು ಹೆಂಡಿಯ ಕಲಸಿ ಥಳಿಯ ಹಾಕಿ
ಸರಸರ ಎಲೆಗಳ ಎತ್ತುತ ಹರಿ ತಾ
ಕಟ್ಟ ಕಡೆಯ ಎಳೆದು ತಾ ನಿಂದಾ [೨]

ಇನ್ನೆನ್ನ ಕೆಲಸವಾಯಿತು ಇನ್ನೇಕೆ ತಡವೆಂದು
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ
ಘನ್ನಮಹಿಮ ಶ್ರೀ ಪುರಂದರ ವಿಠ್ಠಲನು
ಪುಣ್ಯಾತ್ಮರುಂಡ ಎಲೆಗಳ ತಾ ಎತ್ತುತ [೩]


eMjalava baLeda SrIhari
rAjisuva raMjisuva rAjasUya yAgadi [a.pa]

uTTa pItAMbara mElakke kaTTi
kaTTidda hAragaLa hiMdakke sarisi
sAlAgi maNegaLa iTTu eleya hAki
raMgOli koLaveya eLedu tA niMta [1]

bArige hiDidu kasavanne guDisi
nIroLu heMDiya kalasi thaLiya hAki
sarasara elegaLa ettuta hari tA
kaTTa kaDeya eLedu tA niMdA [2]

innenna kelasavAyitu innEke taDaveMdu
innoMdu paMktiya kUDa hELeMda
Gannamahima shrI puraMdara viThThalanu
puNyAtmaruMDa elegaLa tA ettuta [3]

Leave a Reply

Your email address will not be published. Required fields are marked *

You might also like

error: Content is protected !!